ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮುಂಬೈನ ರಾಸಾಯನಿಕ ಕಾರ್ಖಾನೆಯಲ್ಲಿ ಬೆಂಕಿ ಅವಘಡ; ಮೂವರು ಬಲಿ, ಐವರಿಗೆ ಗಾಯ

Last Updated 9 ಮಾರ್ಚ್ 2018, 11:46 IST
ಅಕ್ಷರ ಗಾತ್ರ

ಮುಂಬೈ: ಮಹಾರಾಷ್ಟ್ರದ ತಾರಾಪುರದಲ್ಲಿರುವ ಪಲ್ಗಾರ್ ರಾಸಾಯನಿಕ ಕಾರ್ಖಾನೆಯಲ್ಲಿ ಗುರುವಾರ ರಾತ್ರಿ ಸಂಭವಿಸಿದ ಭಾರಿ ಬೆಂಕಿ ಅವಘಡದಲ್ಲಿ ಮೂವರು ಜೀವ ಕಳೆದುಕೊಂಡಿದ್ದಾರೆ. ಐವರು ಗಾಯಗೊಂಡಿದ್ದಾರೆ.

ಮೃತರನ್ನು ಪಿಂಟು ಕುಮಾರ್ ಗೌತಮ್, ಜಾನು ಅದಾರಿಯಾ, ಲೋಕ್ ನಾಥ್ ಎಂದು ಗುರುತಿಸಲಾಗಿದೆ.

ಈ ಅವಘಡದಿಂದ ನೊವಾಪೆನ್ , ಯುನಿಮ್ಯಾಕ್ಸ್, ಪ್ರಚಿ, ಆರತಿ ಡ್ರಗ್ಸ್, ಭಾರತ್ ರಸಾಯನ್ , ದರ್ಬಾರ್  ಕಾರ್ಖಾನೆಗಳು ಹಾನಿಗೊಳಗಾಗಿವೆ. ಇದೀಗ ಬೆಂಕಿ ಹರಡುವಿಕೆ ನಿಯಂತ್ರಣಕ್ಕೆ ಬಂದಿದೆ. ಆದರೆ ಕೆಲವು ಪ್ರದೇಶಗಳು ಬೆಂಕಿಯ ಕೆನ್ನಾಲಿಗೆಗೆ ತುತ್ತಾಗಿವೆ.  ಅಗ್ನಿಶಾಮಕ ಸಿಬ್ಬಂದಿಯಿಂದ ರಕ್ಷಣಾ ಕಾರ್ಯಾಚರಣೆ ಮುಂದುವರೆದಿದೆ ಎಂದು ಪಲ್ಗಾರ್ ಎಸ್‌ಪಿ ಮಂಜುನಾಥ್ ಸಿಂಘೆ ಹೇಳಿದ್ದಾರೆ.

ಬಾಯ್ಲರ್‌ನ ರಾಸಾಯನಿಕ ದ್ರಾವಕ ಸೋರಿಕೆಯಿಂದ ಉಂಟಾದ ಹೆಚ್ಚಿನ ಉಷ್ಣಾಂಶ ಹಾಗೂ ಒತ್ತಡದಿಂದ ಈ ಅವಘಡ ಸಂಭವಿಸಿದೆ ಎಂದು ಪ್ರಾಥಮಿಕ ತನಿಖೆಯಿಂದ ತಿಳಿದು ಬಂದಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT