7

ಮಕ್ಕಳಿಗಾಗಿ ಒಂದು ವರ್ಷ ವಿರಾಮ

Published:
Updated:
ಮಕ್ಕಳಿಗಾಗಿ ಒಂದು ವರ್ಷ ವಿರಾಮ

ಬಾಡಿಗೆ ತಾಯ್ತನದ ಮೂಲಕ ಅವಳಿ ಮಕ್ಕಳ ಅಪ್ಪನಾಗಿರುವ ಕರಣ್‌, ಒಂದು ವರ್ಷ ನಿರ್ದೇಶನದಿಂದ ವಿರಾಮ ತೆಗೆದುಕೊಳ್ಳುತ್ತಿದ್ದಾರೆ ಎನ್ನಲಾಗಿದೆ. ಮಕ್ಕಳೊಂದಿಗೆ ಕಳೆಯುವ ಪ್ರತಿ ಕ್ಷಣವೂ ಅಮೂಲ್ಯ ಎಂದಿರುವ ಇವರು, ಆ ಸಂಭ್ರಮವನ್ನು ಸಂಪೂರ್ಣವಾಗಿ ಅನುಭವಿಸಲು ಈ ನಿರ್ಧಾರ ಮಾಡಿದ್ದಾರೆ.

ಧರ್ಮ ಪ್ರೊಡಕ್ಷನ್ಸ್ ಸಂಸ್ಥೆಯ ಮಾಲೀಕರಾಗಿರುವ ಕರಣ್, ಸದ್ಯ ಸಿನಿಮಾ ನಿರ್ಮಾಣದ ಕಡೆಗೆ ಮಾತ್ರ ಗಮನ ನೀಡುತ್ತಿದ್ದಾರೆ. ಇದೇ ಕಾರಣಕ್ಕೆ ‘ಕಾಫಿ ವಿತ್‌ ಕರಣ್‌’ ಕಾರ್ಯಕ್ರಮವನ್ನು ಕೂಡ 2019ಕ್ಕೆ ಮುಂದೂಡಿದ್ದಾರೆ ಎನ್ನಲಾಗಿದೆ.

ಯಶ್ ಮತ್ತು ರೂಹಿ ಜೊತೆಗಿನ ಮಧುರ ಕ್ಷಣವನ್ನು ಅವಕಾಶ ಸಿಕ್ಕಾಗಲೆಲ್ಲ ಮೆಲುಕು ಹಾಕುವ ಕರಣ್‌, ಮಕ್ಕಳಿಗೆ ನನ್ನ ಅಗತ್ಯವಿದೆ ಎಂದಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry