ಮಹಿಳಾ ದಿನಕ್ಕೆ ಬಾರ್ಬಿ ಕೊಡುಗೆ

7

ಮಹಿಳಾ ದಿನಕ್ಕೆ ಬಾರ್ಬಿ ಕೊಡುಗೆ

Published:
Updated:
ಮಹಿಳಾ ದಿನಕ್ಕೆ ಬಾರ್ಬಿ ಕೊಡುಗೆ

ಬಾರ್ಬಿ ಗೊಂಬೆ ತಯಾರಿಕ ಕಂಪೆನಿ ಮ್ಯಾಟೆಲ್. ಇಂಕ್ ಮಹಿಳಾ ದಿನಾಚರಣೆಗೆ ಅದ್ಭುತ ಕೊಡುಗೆಯನ್ನೇ ನೀಡಿದೆ. ‘ಇನ್ಸ್‌ಪೈರಿಂಗ್‌ ವೂಮೆನ್‌’ ಎಂಬ ಹೆಸರಿನ ನೂತನ ಸಂಗ್ರಹ ಬಿಡುಗಡೆ ಮಾಡಿದ್ದು, ಇದು ಗೊಂಬೆಗಳ ಪ್ರಿಯರ ಮನ ಗೆದ್ದಿದೆ.

ಜನಪ್ರಿಯ ಕಲಾವಿದೆ ಫ್ರಿಡಾ ಕಹ್ಲೊ, ಲೇಖಕಿ ಅಮೆಲಿಯಾ ಇಯಹಾರ್ಟ್‌, ಗಣಿತಜ್ಞೆ ಕ್ಯಾಥರೀನ್ ಜಾನ್ಸನ್ ಗೊಂಬೆಗಳ ರೂಪ ಪಡೆದಿದ್ದಾರೆ. ಈ ಮೂವರಿಗೆ ಗೌರವ ಸಲಿಸುವ ಸಲುವಾಗಿಯೇ ಈ ಹೊಸ ಗೊಂಬೆಗಳನ್ನು ತಯಾರಿಸಲಾಗಿದೆ.

ಇದರ ಜೊತೆಗೆ ವಿವಿಧ ಕ್ಷೇತ್ರಗಳಲ್ಲಿ ಹೆಸರು ಗಳಿಸಿರುವ ಹದಿನಾಲ್ಕು ಉದಯೋನ್ಮುಖ ತಾರೆಯರನ್ನು ಹೋಲುವ ಗೊಂಬೆಗಳನ್ನು ಈ ಕಂಪೆನಿ ಬಿಡುಗಡೆ ಮಾಡಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry