ಇರಲಿ ಸಮಾಧಾನ...

7

ಇರಲಿ ಸಮಾಧಾನ...

Published:
Updated:
ಇರಲಿ ಸಮಾಧಾನ...

* ಕೋಪಕ್ಕೆ ನಿಯಂತ್ರಣವಿರಲಿ: ಕೋಪದ ಭರದಲ್ಲಿ ಎದುರುಗಿರುವವರ ಮೇಲೆ ರೇಗುವುದು ಸಹಜ. ಈ ಪ್ರವೃತ್ತಿ ಮುಂದುವರೆದರೆ ಕಚೇರಿಯಲ್ಲಿ ಉತ್ತಮ ಬಾಂಧವ್ಯ ಮುಂದುವರೆಯಲು ಸಾಧ್ಯವಾಗುವುದಿಲ್ಲ. ಹೀಗಾಗಿ ನೀವು ಈಗಾಗಲೇ ರೇಗಿದ್ದರೆ ಇನ್ನೊಮ್ಮೆ ಆ ತಪ್ಪು ಮರುಕಳಿಸದಂತೆ ಎಚ್ಚರ ವಹಿಸಿ. ಜಗಳಗಳು ವಾತಾವರಣವನ್ನು ಹದಗೆಡಿಸುತ್ತವೆ ಎಂಬುದು ನೆನಪಿರಲಿ.

* ಮಾತನಾಡಿ ಸಮಸ್ಯೆ ಬಗೆಹರಿಸಿ: ಕಚೇರಿಯಲ್ಲಿ ಯಾರೊಟ್ಟಿಗೂ ಮುನಿಸಿಕೊಳ್ಳುವುದು ಸರಿಯಲ್ಲ. ಮುಖವನ್ನು ಗಂಟಿಕ್ಕಿಕೊಳ್ಳುವುದು ಕೆಲಸದ ಮೇಲೆಯೂ ಪರಿಣಾಮ ಬೀರುತ್ತದೆ. ಹಾಗಾಗಿ ಮೌನವಾಗಿ ಇರುವುದಕ್ಕಿಂತ ಮಾತನಾಡಿ ಸಮಸ್ಯೆ ಬಗೆಹರಿಸಿಕೊಳ್ಳಿ.

* ಉತ್ತಮ ಆಹಾರ ಸೇವಿಸಿ: ಕಚೇರಿ ಜಗಳಗಳಿಗೂ ನೀವು ತಿನ್ನುವ ಆಹಾರಕ್ಕೂ ಸಂಬಂಧವಿದೆ ಗೊತ್ತೆ? ಒತ್ತಡ ನಿವಾರಣೆಗೆ ಮೂಡ್‌ ಸರಿಯಾಗುವುದು ಅಗತ್ಯ. ಅಮಿನೊ ಆ್ಯಸಿಡ್‌ ಹೊಂದಿದ ಆಹಾರಗಳು ಮೂಡ್‌ ಬೂಸ್ಟರ್‌ನಂತೆ ಕೆಲಸ ಮಾಡುತ್ತವೆ. ಒಮೆಗಾ 3 ಫ್ಯಾಟಿ ಆಸಿಡ್ಸ್‌ ಹೊಂದಿರುವ ಆಹಾರಗಳು ನಮ್ಮ ಮನಸ್ಸಿನಲ್ಲಿ ಖುಷಿಯ ಭಾವ ಸ್ಫುರಿಸುತ್ತವೆ. ಅಗಸೆ ಬೀಜ, ವಾಲ್‌ನಟ್ಸ್‌, ಸಾಲ್ಮನ್‌ಗಳಲ್ಲಿ ಒಮೆಗಾ 3 ಫ್ಯಾಟಿ ಆ್ಯಸಿಡ್‌ ಅಂಶ ಹೆಚ್ಚಿರುತ್ತದೆ. ಬೆರ್ರಿಹಣ್ಣುಗಳ ಸೇವನೆ ಉತ್ತಮ ಫಲಿತಾಂಶ ನೀಡುತ್ತದೆ. ಸ್ಟ್ರಾಬೆರ‍್ರಿ, ಬ್ಲೂಬೆರ‍್ರಿ, ರಸಬೆರ‍್ರಿ ಹಣ್ಣುಗಳು ಒತ್ತಡ, ಆತಂಕವನ್ನು ಬಹುಬೇಗನೆ ನಿಯಂತ್ರಿಸುತ್ತವೆ. ನಿಮ್ಮ ಬ್ಯಾಗ್‌ನಲ್ಲಿ ಈ ಹಣ್ಣುಗಳಿಗಾಗಿ ಜಾಗ ಮೀಸಲಿಟ್ಟುಕೊಳ್ಳಿ. ಹಸಿರು ತರಕಾರಿ, ಸೊಪ್ಪು, ಕಿತ್ತಳೆ, ಅಲಸಂದೆ, ಸೋಯಾಬೀನ್‌ಗಳಲ್ಲಿ ಫೋಲಿಕ್‌ ಆ್ಯಸಿಡ್‌ ಅಂಶ ಹೆಚ್ಚಿರುತ್ತದೆ. ನಿಮ್ಮ ಆಹಾರದಲ್ಲಿ ಇವುಗಳನ್ನು ಹೆಚ್ಚಾಗಿ ಬಳಸಿ.

* ವೈಯಕ್ತಿಕವಾಗಿ ತೆಗೆದುಕೊಳ್ಳದಿರಿ: ಕಚೇರಿಯಲ್ಲಿ ನಡೆಯುವ ಯಾವುದೇ ವಿಷಯಗಳನ್ನೂ ವೈಯಕ್ತಿಕವಾಗಿ ತೆಗೆದುಕೊಳ್ಳದಿರಿ.  ಮೇಲಿನವರು ನಿಮ್ಮ ಮೇಲೆ ಸಿಟ್ಟಾದರೂ, ಅದು ಕೆಲಸದ ವಿಷಯಕ್ಕಾಗಿರುತ್ತದೆ. ಹಾಗಾಗಿ ಯಾವುದನ್ನು ಉದ್ದೇಶಪೂರ್ವಕ ಎಂದುಕೊಳ್ಳದೇ ವೃತ್ತಿಪರರಾಗಿ ಯೋಚಿಸಿ.

* ಚಿಕ್ಕ ವ್ಯಾಯಾಮ ಮಾಡಿ: ನಿರಂತರವಾಗಿ ಕೆಲಸ ಮಾಡುವುದರಿಂದ ಒತ್ತಡ ಹೆಚ್ಚುತ್ತದೆ. ಜೊತೆಗೆ ಮನಸು ಒಂದೆಡೆಗೆ ನಿಂತಂತೇ ಆಗುತ್ತದೆ. ಕೆಲಸದ ಮಧ್ಯೆ ಐದಾರು ನಿಮಿಷ ಸಣ್ಣಪುಟ್ಟ ವ್ಯಾಯಾಮ ಮಾಡಿ. ಚಿಕ್ಕದೊಂದು ವಾಕಿಂಗ್‌ ಮಾಡಿ. ಇದರಿಂದ ಚಟುವಟಿಕೆಯಿಂದಿರುವುದು ಸಾಧ್ಯವಾಗುತ್ತದೆ.

* ಗೆಳೆಯರೊಂದಿಗೆ ಮಾತನಾಡಿ: ನಿಮ್ಮ ಗೆಳೆಯರೊಂದಿಗೆ ಕೆಲಸದಿಂದ ಬಿಡುವು ಪಡೆದು ಮಾತನಾಡಿ. ಇದರಿಂದ ಮಿದುಳಿಗೆ ವಿರಾಮ ದೊರಕುತ್ತದೆ. ಮಾತು, ನಗು ಕೆಲಸದ ಒತ್ತಡವನ್ನು ಕಡಿಮೆ ಮಾಡುತ್ತದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry