ಬೆಳಗಾವಿ–ರಾಯಚೂರು ರಾಜ್ಯ ಹೆದ್ದಾರಿಯಲ್ಲಿ ಭೀಕರ ಅಪಘಾತ; ಸ್ಥಳದಲ್ಲೇ 7 ಮಂದಿ ಸಾವು

7

ಬೆಳಗಾವಿ–ರಾಯಚೂರು ರಾಜ್ಯ ಹೆದ್ದಾರಿಯಲ್ಲಿ ಭೀಕರ ಅಪಘಾತ; ಸ್ಥಳದಲ್ಲೇ 7 ಮಂದಿ ಸಾವು

Published:
Updated:
ಬೆಳಗಾವಿ–ರಾಯಚೂರು ರಾಜ್ಯ ಹೆದ್ದಾರಿಯಲ್ಲಿ ಭೀಕರ ಅಪಘಾತ; ಸ್ಥಳದಲ್ಲೇ 7 ಮಂದಿ ಸಾವು

ಹುನಗುಂದ: ತಾಲೂಕಿನ ರಕ್ಕಸಗಿಯ ಬೆಳಗಾವಿ–ರಾಯಚೂರು ರಾಜ್ಯ ಹೆದ್ದಾರಿಯಲ್ಲಿ ಎತ್ತಿನ ಗಾಡಿಗೆ ಲಾರಿ ಡಿಕ್ಕಿ ಹೊಡೆದ ಪರಿಣಾಮ ಒಂದೇ ಕುಟುಂಬದ ಏಳು ಮಂದಿ ಸಾವಿಗೀಡಾಗಿದ್ದಾರೆ. ಇಬ್ಬರ ಸ್ಥಿತಿ ಚಿಂತಾಜನಕವಾಗಿದೆ.

ಮೃತರನ್ನು ರಕ್ಕಸಗಿಯ ನಿವಾಸಿ ಚಂದ್ರಯ್ಯ ಹಿರೇಮಠ, ಪತ್ನಿ ರತ್ನಮ್ಮ, ಮಕ್ಕಳಾದ ಕಾಶಮ್ಮ, ವಿಜಯಲಕ್ಷ್ಮೀ, ಬಸವ್ವಗೊರವರ, ಚೌಡವ್ವ ಚಲವಾದಿ, ಸಿದ್ದವ್ವ ಹೂಗಾರ ಎಂದು ಗುರುತಿಸಲಾಗಿದೆ.

ಹೊಲಕ್ಕೆ ತೊಗರಿ ರಾಶಿ ಮಾಡಲು ತೆರಳಿದ್ದರು. ಅಲ್ಲಿಂದ ಕೆಲಸ ಮುಗಿಸಿ ಮನೆಗೆ ಮರಳುತ್ತಿದ್ದಾಗ ಎತ್ತಿನಗಾಡಿಗೆ ಲಾರಿ ಡಿಕ್ಕಿ ಹೊಡೆದಿದೆ. ಆಗ ಈ ಭೀಕರ ಅಪಘಾತ ಸಂಭವಿಸಿದೆ. ಈ ವೇಳೆ ಒಂದು ಎತ್ತು ಕೂಡ ಸಾವಿಗೀಡಾಗಿದ್ದು, ಮತ್ತೊಂದು ತೀವ್ರವಾಗಿ ಗಾಯಗೊಂಡಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry