‘ರೇಷ್ಮೆ ಸೀರೆ ಅಂದ್ರೆ ಇಷ್ಟ’

7

‘ರೇಷ್ಮೆ ಸೀರೆ ಅಂದ್ರೆ ಇಷ್ಟ’

Published:
Updated:
‘ರೇಷ್ಮೆ ಸೀರೆ ಅಂದ್ರೆ ಇಷ್ಟ’

ಇರಾನಿ ನಟಿಯರು ಇತರ ದೇಶಗಳ ನಟಿಯರಿಗಿಂತ ಹೇಗೆ ಭಿನ್ನ?

ಇರಾನ್ ದೇಶದ ಒಟ್ಟು ಜನಸಂಖ್ಯೆಯಲ್ಲಿ ಮಹಿಳೆಯರು ಶೇ64. ನಮ್ಮ ದೇಶದ ಮಹಿಳೆಯರು ಬಾಲ್ಯದಿಂದಲೇ ಕಲೆಯ ಬಗ್ಗೆ ಆಸಕ್ತಿ ಹೊಂದಿರುತ್ತಾರೆ. ಹಾಗಾಗಿ, ಅವರಿಗೆ ನಟನೆ ಕಷ್ಟವಲ್ಲ. ಬಹುತೇಕರು ‘ಇರಾನಿ ಮಹಿಳೆಯರ ಸ್ಥಿತಿ ದುರ್ಬರ’ ಎಂದು ಭಾವಿಸಿದ್ದಾರೆ. ಇದು ಸತ್ಯಕ್ಕೆ ದೂರವಾದ ಮಾತು. ನಾವು ಬಾಲ್ಯದಿಂದಲೇ ಸಬಲರಾಗಿ ಬದುಕುವನ್ನು ಕಲಿತಿರುತ್ತೇವೆ.

ಇರಾನ್‌ನಲ್ಲಿ ಮಹಿಳೆಯೊಬ್ಬಳು ನಟನೆಯನ್ನು ವೃತ್ತಿಯಾಗಿಸಿಕೊಳ್ಳಲು ಅಡೆತಡೆಗಳಿಲ್ಲವೇ?

ಖಂಡಿತಾ ಇಲ್ಲ. ರಾಜಕೀಯ ಪ್ರಶ್ನೆಗಳನ್ನು ನಾವು ಚರ್ಚಿಸುವುದು ಬೇಡ. ಬಹುತೇಕ ಇರಾನಿ ಸಿನಿಮಾಗಳು ಮಹಿಳಾ ಪ್ರಧಾನ ಕಥಾವಸ್ತು ಹೊಂದಿರುತ್ತವೆ. ನಮ್ಮಲ್ಲಿ ಬಾಲಿವುಡ್‌ನಂತೆ ಮಹಿಳೆಯರನ್ನು ಕಮರ್ಷಿಯಲ್ ದೃಷ್ಟಿಯಲ್ಲಿ ಚಿತ್ರೀಕರಿಸುವುದಿಲ್ಲ. ಹೆಚ್ಚಿನವರು ಹಣಕ್ಕಾಗಿ ಸಿನಿಮಾ ಮಾಡುವುದಿಲ್ಲ. ಮಹಿಳೆ ಮತ್ತು ಪುರುಷ ಜತೆಜತೆಯಾಗಿ ಕೆಲಸ ಮಾಡುತ್ತೇವೆ. ಸಿನಿಮಾ ನಮ್ಮ ಪಾಲಿಗೆ ಒಂದು ವೃತ್ತಿ ಅಷ್ಟೇ. ಅಲ್ಲಿ ವ್ಯಾಪಾರಿ ದೃಷ್ಟಿಕೋನವಿಲ್ಲ.

ಯಾವ್ಯಾವ ಭಾರತೀಯ ಸಿನಿಮಾಗಳನ್ನು ನೋಡಿದ್ದೀರಾ? ನಿಮ್ಮ ಇಷ್ಟದ ನಟಿ ಯಾರು?

ಸಾಕಷ್ಟು ಸಿನಿಮಾಗಳನ್ನು ನೋಡಿದ್ದೇನೆ. ಹೆಸರುಗಳು ನೆನಪಾಗುತ್ತಿಲ್ಲ. ಮಾಧುರಿ ದೀಕ್ಷಿತ್ ನನ್ನ ಮೆಚ್ಚಿನ ನಟಿ. ಆಕೆ ತುಂಬಾ ಜಾಣೆ ಮತ್ತು ಚೆನ್ನಾಗಿ ಡಾನ್ಸ್ ಮಾಡುತ್ತಾಳೆ. ಇತ್ತೀಚೆಗೆ ಕಾಜೋಲ್ ಇಷ್ಟವಾಗುತ್ತಿದ್ದಾಳೆ. ಅವಳದ್ದು ಸಂಯಮದ ಅಭಿನಯ. ನೋಡಲು ತುಂಬಾ ಸ್ವೀಟ್ ಅನಿಸುತ್ತಾಳೆ.

ಭಾರತದ ಬಗ್ಗೆ ಏನನ್ನಿಸುತ್ತೆ?

24 ವರ್ಷಗಳ ಹಿಂದೆ ಭಾರತಕ್ಕೆ ಮೊದಲ ಬಾರಿಗೆ ಬಂದಿದ್ದೆ. ಅಂದಿಗೂ ಇಂದಿಗೂ ಬಹಳಷ್ಟು ವ್ಯತ್ಯಾಸವಾಗಿದೆ. ಆಗ ಅಪ್ಪಟ ಭಾರತೀಯ ಸಂಸ್ಕೃತಿ ಕಾಣುತ್ತಿತ್ತು. ಈಗ ಪಾಶ್ಚಾತ್ಯ ಪ್ರಭಾವ ಹೆಚ್ಚಿದೆ. ಅಮೆರಿಕದಂತೆ ಅಲ್ಲಲ್ಲಿ ಮಾಲ್‌ಗಳಾಗಿವೆ. ಆದರೆ, ಗುಣಮಟ್ಟ ಮಾತ್ರ ಇಲ್ಲ. ಭಾರತದಲ್ಲೀಗ ಬಹುಸಂಸ್ಕೃತಿ ಕಾಣುತ್ತಿದೆ.

ನಟಿ, ನಿರ್ದೇಶಕಿಯಲ್ಲದೇ ಬೇರೆ ಯಾವ ಕೆಲಸಗಳಲ್ಲಿ ತೊಡಗಿಸಿಕೊಂಡಿದ್ದೀರಿ?

ಇರಾನ್‌ ನಟಿಯರ ಸಂಘ ಕಟ್ಟಿದ್ದೇನೆ. ಮಕ್ಕಳ ಕ್ಯಾನ್ಸರ್ ಜಾಗೃತಿ ಕೆಲಸದಲ್ಲಿ ತೊಡಗಿಕೊಂಡಿದ್ದೇನೆ.

ಇಡ್ಲಿ–ಸಾಂಬಾರ್‌ ತಿಂದಿದ್ದೀರಾ?

ಜೋರಾಗಿ ನಗು. ಖಂಡಿತಾ ತಿಂದಿದ್ದೇನೆ. ಭಾರತೀಯ ಅಡುಗೆಯ ಸ್ವಾದ ತಿಂದೇ ಅನುಭವಿಸಬೇಕು. ಮನೆಯಲ್ಲಿ ಆಗಾಗ ಭಾರತೀಯ ಅಡುಗೆ ಮಾಡ್ತಾ ಇರ್ತೀನಿ. ಅನ್ನ, ಸಾಂಬಾರ್, ಕರ‍್ರಿ ಮಾಡ್ತೀನಿ. ಇಡ್ಲಿ–ಸಾಂಬಾರ್ ಅಷ್ಟೇ ಅಲ್ಲ, ರೇಷ್ಮೆ ಸೀರೆಗಳೂ ಬಹಳ ಇಷ್ಟ. ನನ್ನ ಬಳಿ ರೇಷ್ಮೆ ಸೀರೆಗಳ ಸಂಗ್ರಹವೇ ಇದೆ. ಆದರೆ, ಸೀರೆ ಉಡಲು ಬರೋದಿಲ್ಲ. ಅದಕ್ಕೆ ಆ ಸೀರೆಗಳನ್ನ ಸೋಫಾ ಕವರ್, ಕರ್ಟನ್ ಆಗಿ ಬಳಸ್ತೀನಿ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry