‘ದಡಕ್’ ಸೆಟ್‌ನಲ್ಲಿ ‘ಜಾನ್ವಿ ಕಪೂರ್‘

7

‘ದಡಕ್’ ಸೆಟ್‌ನಲ್ಲಿ ‘ಜಾನ್ವಿ ಕಪೂರ್‘

Published:
Updated:
‘ದಡಕ್’ ಸೆಟ್‌ನಲ್ಲಿ ‘ಜಾನ್ವಿ ಕಪೂರ್‘

ನಟಿ ಶ್ರೀದೇವಿ ‌ನಿಧನರಾದ ಕೆಲವೇ ದಿನಗಳಲ್ಲಿ ಹುಟ್ಟುಹಬ್ಬ ಆಚರಿಸಿಕೊಂಡು ನೆಟಿಜನ್ನರಿಂದ ಟ್ರೋಲ್‌ ಆಗಿದ್ದ ಜಾನ್ವಿ ಕಪೂರ್‌ ಈಗ ಮತ್ತೆ ಸುದ್ದಿಯಲ್ಲಿದ್ದಾರೆ. ತಮ್ಮ ಮೊದಲ ಚಿತ್ರ ‘ದಡಕ್‌’ ಚಿತ್ರೀಕರಣದ ಸೆಟ್‌ಗೆ ಮರಳಿರುವ ಅವರು, ನಿರ್ದೇಶಕ ಶಶಾಂಕ್ ಖೈತಾನ್ ಮತ್ತು ನಟ ಇಶಾನ್ ಕಟ್ಟರ್‌ ಅವರೊಂದಿಗೆ ಬಾಂದ್ರಾದಲ್ಲಿ ಕಾಣಿಸಿಕೊಂಡಿದ್ದಾರೆ. ಚಿತ್ರೀಕರಣ ಇನ್ನೂ ಎರಡು ದಿನ ಬಾಂದ್ರಾದಲ್ಲಿಯೇ ನಡೆಯಲಿದೆ.

ಜಾನ್ವಿ ಅವರ ಈ ನಡೆಗೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ. ಕೆಲವರು ಜಾನ್ವಿಯವರ ಕರ್ತವ್ಯಪ್ರಜ್ಞೆಯನ್ನು ಮೆಚ್ಚಿಕೊಂಡಿದ್ದಾರೆ. ಕೆಲವರು ‘ಸಂಬಂಧಗಳಿಗೆ ಬೆಲೆಕೊಡದವರು’, ‘ಭಾವನಾತ್ಮಕ ಸಂಬಂಧಗಳಿಗಿಂತ ಭವಿಷ್ಯ ಮುಖ್ಯ’ ಎಂದು ಟ್ರೋಲ್ ಮಾಡಿದ್ದಾರೆ.

‘ಜಾನ್ವಿ ಮತ್ತು ಇಶಾನ್‌ ಅವರ ಕೆಲ ರೋಮ್ಯಾಂಟಿಕ್‌ ದೃಶ್ಯಗಳನ್ನು ಬಾಂದ್ರಾದಲ್ಲಿ ಚಿತ್ರೀಕರಿಸಲಾಗುವುದು. ರಾಜಸ್ಥಾನ ಹಾಗೂ ಮುಂಬೈನಲ್ಲಿಯೂ ಸಿನಿಮಾದ ಚಿತ್ರೀಕರಣ ನಡೆಯಲಿದೆ’ ಎಂದು ಚಿತ್ರತಂಡ ಪ್ರತಿಕ್ರಿಯಿಸಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry