ದೀಪಿಕಾ ವಿಶ್ವ ಖ್ಯಾತ ಮಹಿಳೆ

7

ದೀಪಿಕಾ ವಿಶ್ವ ಖ್ಯಾತ ಮಹಿಳೆ

Published:
Updated:
ದೀಪಿಕಾ ವಿಶ್ವ ಖ್ಯಾತ ಮಹಿಳೆ

ಪ್ರತಿಷ್ಠಿತ ‘ವರೈಟಿ’ ನಿಯತಕಾಲಿಕೆ ಪ್ರಕಟಿಸಿರುವ ‘ವಿಶ್ವ ಪ್ರಸಿದ್ಧ 20 ಮಹಿಳೆಯರು’ ಪಟ್ಟಿಯಲ್ಲಿ ನಟಿ ದೀಪಿಕಾ ಪಡುಕೋಣೆ ಹೆಸರು ಇದೆ.

ಅಂತರರಾಷ್ಟ್ರೀಯ ಮಹಿಳಾ ದಿನದಂದು ಈ ಪಟ್ಟಿ ಬಿಡುಗಡೆ ಮಾಡಲಾಗಿತ್ತು. ಇಸ್ರೇಲ್‌ನ ಖ್ಯಾತ ನಟಿ ಗಲ್‌ ಗ್ಯಾಡೊಟ್‌, ಆಸ್ಟ್ರೇಲಿಯಾದ ನಿರ್ಮಾಪಕಿ, ನಟಿ ನಿಕೊಲೆ ಕಿಡ್‌ಮನ್‌, ಜೆ.ಕೆ. ರೌಲಿಂಗ್‌, ಹಾಡುಗಾರ್ತಿ ಅಡೆಲೆ ಅವರ ಜೊತೆಗೆ ಭಾರತದ ನಟಿ ದೀಪಿಕಾ ಹಾಗೂ ನಿರ್ಮಾಪಕಿ ಗುನಿತ್‌ ಮೊಂಗ ಹೆಸರಿದೆ.

‘ಹಾಲಿವುಡ್‌ನಲ್ಲಿಯೂ ಛಾಪು ಮೂಡಿಸಿರುವ ದೀಪಿಕಾ ಬಾಲಿವುಡ್‌ನಲ್ಲಿ ಅತಿಹೆಚ್ಚು ಸಂಭಾವನೆ ಪಡೆಯುತ್ತಿರುವ ನಟಿ. ಸಾಮಾಜಿಕ ಸೇವೆಯಲ್ಲಿಯೂ ತೊಡಗಿಸಿಕೊಂಡಿದ್ದಾರೆ. ಮಾನಸಿಕ ಸಮಸ್ಯೆಯಿಂದ ಬಳಲುತ್ತಿರುವವರಿಗೆ ನೆರವಾಗಲೆಂದು ‘ಲಿವ್‌, ಲಾಫ್‌, ಲವ್‌’ ಪ್ರತಿಷ್ಠಾನ ಸ್ಥಾಪಿಸಿದ್ದಾರೆ’ ಎಂದು ‘ವೆರೈಟಿ’ ಹೇಳಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry