ಮನುಷ್ಯನಿಗಿರುವ ಬೆಲೆ ಮರಕ್ಕೆ ಯಾಕಿಲ್ಲ?

7

ಮನುಷ್ಯನಿಗಿರುವ ಬೆಲೆ ಮರಕ್ಕೆ ಯಾಕಿಲ್ಲ?

Published:
Updated:
ಮನುಷ್ಯನಿಗಿರುವ ಬೆಲೆ ಮರಕ್ಕೆ ಯಾಕಿಲ್ಲ?

ಕಸ್ತೂರಿರಂಗನ್ ವರದಿ ಕುರಿತ ‘ಪ್ರಜಾ ಮತ’ದ ಅಂಕಣ ನಿಜಕ್ಕೂ ರಾಜಕೀಯ ನಾಯಕರಿಗೊಂದು ಚಾಟಿಯೇಟು. ಸಕಲ ಜೀವಿಗಳ ಉಳಿವಿಗೆ ಕಾರಣವಾದ ಮರಗಳ ಸಂರಕ್ಷಣೆಗೆ ರಾಜಕೀಯ ಇಚ್ಛಾಶಕ್ತಿ ಪ್ರದರ್ಶಿಸದಿರುವುದು ವಿಷಾದನೀಯ. ಉತ್ತರದ ಗುಜರಾತ್‌ನಿಂದ ಆರಂಭವಾಗಿ ದಕ್ಷಿಣದ ತುದಿಯ ಕೇರಳಸೇರಿದಂತೆ ಮಹಾರಾಷ್ಟ್ರ, ಗೋವಾ ಕರ್ನಾಟಕ, ತಮಿಳುನಾಡು ರಾಜ್ಯಗಳಲ್ಲಿ ವ್ಯಾಪಿಸಿರುವಪಶ್ಚಿಮಘಟ್ಟ ನಿಜಕ್ಕೂ ನೈಸರ್ಗಿಕ‌ ಸಂಪತ್ತು. ನಶಿಸುತ್ತಿರುವ ಸಸ್ಯ ಮತ್ತು ಪ್ರಾಣಿಸಂಕುಲದ ಉಳಿವು ಹಾಗೂ ಅಭಿವೃದ್ದಿಗೆ ಕಸ್ತೂರಿರಂಗನ್ ವರದಿ ಜಾರಿಗೆ ಸರ್ಕಾರ ಹಾಗೂ ರಾಜಕೀಯ ನಾಯಕರು ಆಸಕ್ತಿ ತೋರಲಿ.

–ಶಫಿಉಲ್ಲ ಎಸ್.ಎಚ್, ಹಿರೇಕುಂಬಳಗುಂಟೆ

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry