ಏಕತೆಗೆ ಧಕ್ಕೆ?

7

ಏಕತೆಗೆ ಧಕ್ಕೆ?

Published:
Updated:

ರಾಜ್ಯ ಸರ್ಕಾರವು ಹೊಸ ನಾಡಧ್ವಜಕ್ಕೆ ಅಂಗೀಕಾರ ನೀಡಿರುವುದರ ಔಚಿತ್ಯ ಪ್ರಶ್ನಾರ್ಹ. ರಾಷ್ಟ್ರವನ್ನು ಕುರಿತ ಭಾವನಾತ್ಮಕ ಸಂಬಂಧಗಳು ಸಡಿಲವಾಗುತ್ತಿರುವ ಇಂದಿನ ಸಂದರ್ಭದಲ್ಲಿ ಕರ್ನಾಟಕದಂತೆಯೇ ಎಲ್ಲ ರಾಜ್ಯಗಳು ತಮ್ಮದೇ ಆದ ಧ್ವಜವನ್ನು ರೂಪಿಸುತ್ತಾ ಹೋದರೆ, ರಾಷ್ಟ್ರದ ಭಾವೈಕ್ಯಕ್ಕೆ ಧಕ್ಕೆ ಉಂಟಾಗಬಹುದು ಎಂಬುದು ನನ್ನ ಅನಿಸಿಕೆ.

ನಮ್ಮ ದೇಶದ ಎಲ್ಲಾ ರಾಜ್ಯಗಳಲ್ಲೂ ಅವುಗಳದ್ದೇ ಆದ ಸಮಸ್ಯೆ, ಕುಂದುಕೊರತೆಗಳು ಇರುವಾಗ, ಅವುಗಳ ನಿವಾರಣೆಗೆ ಆದ್ಯತೆ ಕೊಡುವುದು ಸರ್ಕಾರಗಳ ಜವಾಬ್ದಾರಿ. ಮುಖ್ಯವಾಗಿ ನೀರಿನ ಉಳಿತಾಯ, ರೈತರ ಜೀವನ ಮಟ್ಟ ಸುಧಾರಣೆ, ನೈರ್ಮಲ್ಯದ ಬಗ್ಗೆ ತಿಳಿವಳಿಕೆ ನೀಡುವುದು, ನಗರ ಪ್ರದೇಶಗಳಲ್ಲಿ ತ್ಯಾಜ್ಯ ವಿಲೇವಾರಿ ವ್ಯವಸ್ಥೆ, ಪರಿಸರದ ಕಾಳಜಿ ಇತ್ಯಾದಿಗಳತ್ತ ಸರ್ಕಾರಗಳು ಹೆಚ್ಚಿನ ಒತ್ತು ನೀಡಿದರೆ ಒಳಿತು.

-ವಿ.ವಿಜಯೇಂದ್ರ ರಾವ್, ಬೆಂಗಳೂರು

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry