ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಫೆನ್ನಿಂಗ್ಸ್: ಕರ್ನಾಟಕಕ್ಕೆ ಮೂರು ಪದಕ

Last Updated 9 ಮಾರ್ಚ್ 2018, 19:30 IST
ಅಕ್ಷರ ಗಾತ್ರ

ಇಂಪಾಲ್: ಮಣಿಪುರದಲ್ಲಿ ನಡೆಯುತ್ತಿರುವ 11ನೇ ರಾಷ್ಟ್ರೀಯ ಗಾಲಿಕುರ್ಚಿ ಫೆನ್ಸಿಂಗ್ ಚಾಂಪಿಯನ್‌ಷಿಪ್‌ನಲ್ಲಿ ಕರ್ನಾಟಕ ತಂಡ ಎರಡು ಬೆಳ್ಳಿ ಮತ್ತು ಒಂದು ಕಂಚಿನ ಪದಕವನ್ನು ಗೆದ್ದುಕೊಂಡಿದೆ.

ತಂಡಗಳ ವಿಭಾಗದಲ್ಲಿ ಕರ್ನಾಟಕ ಬೆಳ್ಳಿ ಮತ್ತು ಕಂಚಿನ ಪದಕ ಪಡೆದ ಸಾಧನೆ ಮಾಡಿತು. ಕರ್ನಾಟಕಕ್ಕೆ ಸೆಬರ್ ಮತ್ತು ಹಿಪ್ಪಿ ವಿಭಾಗದಲ್ಲಿ ಬೆಳ್ಳಿ ಪದಕ ಬಂದರೆ ಫಾಯಿಲ್ ವಿಭಾಗದಲ್ಲಿ ಕಂಚಿನ ಪದಕ ಪಡೆಯಿತು.

ಸೆಬರ್‌ ವಿಭಾಗದಲ್ಲಿ ಮಣಿಪುರ ತಂಡದ ಜೊತೆ ಫೈನಲ್ ಆಡಿದ ಕರ್ನಾಟಕ ಬೆಳ್ಳಿ ಪದಕಕ್ಕೆ ತೃಪ್ತಿಪಟ್ಟುಕೊಂಡಿತು. ಹಿಪ್ಪಿ ವಿಭಾಗದ ಫೈನಲ್‌ನಲ್ಲಿ  ಒಡಿಶಾ ತಂಡದ ಎದುರು ಸೋಲು ಕಂಡು ಬೆಳ್ಳಿ ಪದಕ ಪಡೆಯಿತು. ಫಾಯಿಲ್ ವಿಭಾಗದ ಸೆಮಿಫೈನಲ್ ಪಂದ್ಯದಲ್ಲಿ ಒಡಿಶಾ ಎದುರು ಸೋತು ಕಂಚಿನ ಪದಕಕ್ಕೆ ತೃಪ್ತಿಪಟ್ಟುಕೊಂಡಿತು.

ಅಂತರರಾಷ್ಟ್ರೀಯ ಗಾಲಿಕುರ್ಚಿ ಫೆನ್ಸಿಂಗ್ ಆಟಗಾರರಾದ ತ್ಯಾಗರಾಜ್, ವೆಂಕಟೇಶ್ ಬಾಬು ಉತ್ತಮ ಆಟ ಆಡಿದರು. ಇವರಿಗೆ ತಂಡದ ಸದಸ್ಯರಾದ ತಿಮ್ಮಣ್ಣ ಸಾಥ್ ನೀಡಿದರು.

ಇಲ್ಲಿನ ಕುಮಾನ್ ಲಾಂಪಾಕ್ ಒಳಾಂಗಣ ಕ್ರೀಡಾಂಗಣದಲ್ಲಿ ಪಂದ್ಯಗಳು ನಡೆದವು.

ತ್ಯಾಗರಾಜನ್, ವೆಂಕಟೇಶ್ ಬಾಬು, ತಿಮ್ಮಣ್ಣ ಹಾಗೂ ಪ್ರಜಾವಾಣಿಯ ಉಪಸಂಪಾದಕ ಎಂ.ಎಚ್.ಪೃಥ್ವಿರಾಜ್ ಕರ್ನಾಟಕ ತಂಡವನ್ನು ಪ್ರತಿನಿಧಿಸಿದ್ದರು.‌

ಪೃಥ್ವಿಗೆ ಕಂಚು: ಪೃಥ್ವಿರಾಜ್ ವೈಯಕ್ತಿಕ ವಿಭಾಗದಲ್ಲಿ ಕಂಚಿನ ಪದಕ ಗೆದ್ದರು. ಫಾಯಿಲ್‌ ಬಿ ಕೆಟಗರಿ ಪಂದ್ಯದಲ್ಲಿ ಆಂಧ್ರಪ್ರದೇಶದ ಯೇಸುದಾಸ್ ಅವರನ್ನು 8-2 ಅಂಕಗಳೊಂದಿಗೆ ಮಣಿಸುವ ಮೂಲಕ ಸೆಮಿಫೈನಲ್‌ಗೆ ಲಗ್ಗೆ ಹಾಕಿದರು. ಆದರೆ ಸೆಮಿಫೈನಲ್‌ನಲ್ಲಿ ಸೋತು ಕಂಚಿನ ಪದಕಕ್ಕೆ ತೃಪ್ತಿಪಟ್ಟುಕೊಂಡರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT