ಮಹಮ್ಮದ್ ಶಮಿ ವಿರುದ್ಧ ಪತ್ನಿ ದೂರು ದಾಖಲು

ಬುಧವಾರ, ಮಾರ್ಚ್ 27, 2019
22 °C

ಮಹಮ್ಮದ್ ಶಮಿ ವಿರುದ್ಧ ಪತ್ನಿ ದೂರು ದಾಖಲು

Published:
Updated:
ಮಹಮ್ಮದ್ ಶಮಿ ವಿರುದ್ಧ ಪತ್ನಿ ದೂರು ದಾಖಲು

ಕೋಲ್ಕತ್ತ: ಕೌಟುಂಬಿಕ ದೌರ್ಜನ್ಯ ಮತ್ತು ಶೀಲ ಶಂಕಿಸಿ ಹಲ್ಲೆ ನಡೆಸಿದ ಆರೋಪಕ್ಕೆ ಸಂಬಂಧಿಸಿ ವೇಗದ ಬೌಲರ್‌ ಮಹಮ್ಮದ್ ಶಮಿ ಅವರ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ. ಅವರ ಪತ್ನಿ ಹಸೀನ್ ಜಹಾನ್‌ ದೂರು ಸಲ್ಲಿಸಿದ್ದರು.

ಶಮಿ ಮಹಿಳೆಯೊಬ್ಬಳೊಂದಿಗೆ ಅನೈತಿಕ ಸಂಬಂಧ ಹೊಂದಿದ್ದಾರೆ ಎಂದು ಕೆಲವು ದಿನಗಳ ಹಿಂದೆ ಜಹಾನ್ ಆರೋಪಿಸಿದ್ದರು. ಹೀಗಾಗಿ ಅವರ ಗುತ್ತಿಗೆಯನ್ನು ನವೀಕರಿಸಲು ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿ ನಿರಾಕರಿಸಿತ್ತು.

‘ಜಹಾನ್ ಅವರ ಲಿಖಿತ ದೂರು ಲಭಿಸಿದ ಕಾರಣ ಶಮಿ ಮತ್ತು ಅವರ ಸಹೋದರನ ವಿರುದ್ಧ ಪ್ರಕರಣ ದಾಖಲಿಸಿಕೊಳ್ಳಲಾಗಿದೆ’ ನಗರ ಪೊಲೀಸ್ ಉಪ ಆಯುಕ್ತ ಪ್ರವೀಣ್‌ ತ್ರಿಪಾಠಿ ತಿಳಿಸಿದರು.

‘ಶಮಿಯ ಮೊಬೈಲ್‌ ಫೋನ್‌ನ ಪಾಸ್‌ವರ್ಡ್‌ ಲಭಿಸಿದ್ದರಿಂದಇತ್ತೀಚೆಗೆ ಅವರ ಚಾಟ್‌ಗಳನ್ನು ಪರಿಶೀಲಿಸಿದೆ. ಅವರು ಮಹಿಳೆಯೊಂದಿಗೆ ನಡೆಸಿರುವ ಚಾಟ್‌ ನನ್ನನ್ನು ಬೆಚ್ಚಿ ಬೀಳಿಸಿದವು. ಅಂದು ರಾತ್ರಿ ನನಗೆ ನಿದ್ದೆಯೇ ಬರಲಿಲ್ಲ. ವಿಷಯ ತಿಳಿದ ಶಮಿ ನನ್ನ ಮೇಲೆ ಹಲ್ಲೆ ನಡೆಸಿದ’ ಎಂದು ಜಹಾನ್ ಪತ್ರಕರ್ತರಿಗೆ ತಿಳಿಸಿದರು. ಆರೋಪಗಳನ್ನು ತಳ್ಳಿ ಹಾಕಿದ ಶಮಿ ತಮ್ಮ ತೇಜೋವಧೆಗೆ ನಡೆಸಿದ ಪ್ರಯತ್ನ ಇದು ಎಂದು ಹೇಳಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry