ರಬಾಡ ದಾಳಿಗೆ ಕಂಗೆಟ್ಟ ಆಸ್ಟ್ರೇಲಿಯಾ

7

ರಬಾಡ ದಾಳಿಗೆ ಕಂಗೆಟ್ಟ ಆಸ್ಟ್ರೇಲಿಯಾ

Published:
Updated:
ರಬಾಡ ದಾಳಿಗೆ ಕಂಗೆಟ್ಟ ಆಸ್ಟ್ರೇಲಿಯಾ

ಪೋರ್ಟ್‌ ಎಲಿಜಬೆತ್‌: ಕಗಿಸೊ ರಬಾಡ (96ಕ್ಕೆ5), ಶರವೇಗದ ದಾಳಿಗೆ ಶುಕ್ರವಾರ ಆಸ್ಟ್ರೇಲಿಯಾ ಬ್ಯಾಟ್ಸ್‌ಮನ್‌ಗಳು ಬೆದರಿದರು. ಇದರಿಂದಾಗಿ ದಕ್ಷಿಣ ಆಫ್ರಿಕಾ ತಂಡ ಎರಡನೇ ಟೆಸ್ಟ್‌ ಪಂದ್ಯದ ಮೊದಲ ಇನಿಂಗ್ಸ್‌ನಲ್ಲಿ ಪ್ರವಾಸಿ ಪಡೆಯನ್ನು ಅಲ್ಪ ಮೊತ್ತಕ್ಕೆ ನಿಯಂತ್ರಿಸಿತು.

ಮೊದಲು ಬ್ಯಾಟ್‌ ಮಾಡಿದ ಕಾಂಗರೂಗಳ ನಾಡಿನ ತಂಡ 71.3 ಓವರ್‌ಗಳಲ್ಲಿ 243ರನ್‌ಗಳಿಗೆ ಆಲೌಟ್‌ ಆಯಿತು. ಪ್ರಥಮ ಇನಿಂಗ್ಸ್‌ ಶುರುಮಾಡಿರುವ ಹರಿಣಗಳ ನಾಡಿನ ತಂಡ ಪತ್ರಿಕೆ ಮುದ್ರಣಕ್ಕೆ ಹೋಗುವ ವೇಳೆಗೆ 12 ಓವರ್‌ಗಳಲ್ಲಿ 1 ವಿಕೆಟ್‌ಗೆ 39ರನ್‌ ಗಳಿಸಿತ್ತು.

ಉತ್ತಮ ಅಡಿಪಾಯ: ಸ್ಮಿತ್‌ ಬಳಗಕ್ಕೆ ಕ್ಯಾಮರಾನ್‌ ಬೆನ್‌ಕ್ರಾಫ್ಟ್‌ (38; 91ಎ, 6ಬೌಂ) ಮತ್ತು ಡೇವಿಡ್‌ ವಾರ್ನರ್‌ (63; 100ಎ, 9ಬೌಂ) ಉತ್ತಮ ಆರಂಭ ನೀಡಿದರು.

27ನೇ ಓವರ್‌ನಲ್ಲಿ ವರ್ನಾನ್‌ ಫಿಲಾಂಡರ್‌, ಬೆನ್‌ಕ್ರಾಫ್ಟ್‌ ವಿಕೆಟ್‌ ಉರುಳಿಸಿದರು. ಆ ನಂತರ ತಂಡದ ಕುಸಿತದ ಹಾದಿ ಹಿಡಿಯಿತು. ನಾಯಕ ಸ್ಮಿತ್‌ (25; 58ಎ, 3ಬೌಂ), ಶಾನ್‌ ಮಾರ್ಷ್‌ (24; 52ಎ, 4ಬೌಂ) ಮತ್ತು ಟಿಮ್‌ ಪೇನ್‌ (36; 68ಎ, 5ಬೌಂ) ದೊಡ್ಡ ಮೊತ್ತ ಗಳಿಸಲು ವಿಫಲರಾದರು.

ಸಂಕ್ಷಿಪ್ತ ಸ್ಕೋರ್‌: ಆಸ್ಟ್ರೇಲಿಯಾ: ಪ್ರಥಮ ಇನಿಂಗ್ಸ್‌: 71.3 ಓವರ್‌ಗಳಲ್ಲಿ 243 (ಕ್ಯಾಮರಾನ್‌ ಬೆನ್‌ಕ್ರಾಫ್ಟ್‌ 38, ಡೇವಿಡ್‌ ವಾರ್ನರ್‌ 63, ಸ್ಟೀವ್‌ ಸ್ಮಿತ್‌ 25, ಶಾನ್‌ ಮಾರ್ಷ್‌ 24, ಟಿಮ್‌ ಪೇನ್‌ 36, ಮಿಷೆಲ್‌ ಸ್ಟಾರ್ಕ್‌ 8, ನೇಥನ್‌ ಲಿಯೊನ್‌ 17, ಜೋಶ್‌ ಹ್ಯಾಜಲ್‌ವುಡ್‌ ಔಟಾಗದೆ 10; ವರ್ನಾನ್‌ ಫಿಲ್ಯಾಂಡರ್‌ 25ಕ್ಕೆ2, ಕಗಿಸೊ ರಬಾಡ 96ಕ್ಕೆ5, ಲುಂಗ್‌ ಗಿಡಿ 51ಕ್ಕೆ3). (ವಿವರ ಅಪೂರ್ಣ).

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry