ಫಾರೂಕ್‌ಗೆ ಪಾಸ್‌ಪೋರ್ಟ್‌ ದೊರೆತಿದ್ದು ಹೇಗೆ?

7

ಫಾರೂಕ್‌ಗೆ ಪಾಸ್‌ಪೋರ್ಟ್‌ ದೊರೆತಿದ್ದು ಹೇಗೆ?

Published:
Updated:

ನವದೆಹಲಿ: ಭೂಗತ ಪಾತಕಿ ದಾವೂದ್‌ ಇಬ್ರಾಹಿಂ ಸಹಚರ ಫಾರೂಕ್‌ ಟಕಲಾಗೆ ಪಾಸ್‌ಪೋರ್ಟ್‌ ಯಾವ ರೀತಿ ದೊರೆಯಿತು ಮತ್ತು ಅದನ್ನು ಹೇಗೆ ನವೀಕರಣ ಮಾಡಿಕೊಂಡಿದ್ದ ಎನ್ನುವ ಬಗ್ಗೆ ದುಬೈನಲ್ಲಿರುವ ರಾಯಭಾರ ಕಚೇರಿಯಿಂದ ಪರಿಶೀಲನೆ ನಡೆಸಲಾಗುತ್ತಿದೆ ಎಂದು ವಿದೇಶಾಂಗ ಸಚಿವಾಲಯ ತಿಳಿಸಿದೆ.

ದುಬೈನಿಂದ ಬಂದ ಫಾರುಕ್‌ನನ್ನು ಗುರುವಾರ ನವದೆಹಲಿಯ ಇಂದಿರಾಗಾಂಧಿ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಸಿಬಿಐ ಅಧಿಕಾರಿಗಳು ಬಂಧಿಸಿದ್ದರು.

’ಹಲವಾರು ಅಪರಾಧಗಳಲ್ಲಿ ಭಾಗಿಯಾಗಿದ್ದ ಈತ ಭಾರತಕ್ಕೆ ಬೇಕಾಗಿದ್ದ. ಈತನ ಕೃತ್ಯಗಳ ಬಗ್ಗೆ ಯುಎಇ ಸರ್ಕಾರಕ್ಕೆ ಮಾಹಿತಿ ನೀಡಲಾಗಿತ್ತು. ಹೀಗಾಗಿ, ಯುಎಇ ಅಧಿಕಾರಿಗಳು ಫಾರುಕ್‌ನನ್ನು ಗಡೀಪಾರು ಮಾಡಿದ್ದಾರೆ’ ಎಂದು ವಿದೇಶಾಂಗ ಸಚಿವಾಲಯದ ವಕ್ತಾರ ರವೀಶ್‌ ಕುಮಾರ್‌ ತಿಳಿಸಿದ್ದಾರೆ.

ಕೇಂದ್ರ ಸಚಿವರ ಮಧ್ಯಪ್ರವೇಶ ದಿಂದ ಪಾಸ್‌ಪೋರ್ಟ್‌ ದೊರೆಯಿತು ಎನ್ನುವ ವರದಿಗೆ ಪ್ರತಿಕ್ರಿಯೆ ನೀಡಲು ನಿರಾಕರಿಸಿದ ಅವರು, ’ಪಾಸ್‌

ಪೋರ್ಟ್‌ ಯಾವಾಗ ನವೀಕರಣಗೊಳಿಸಲಾಯಿತು ಎನ್ನುವ ಬಗ್ಗೆ ವಿವರಗಳನ್ನು ಪಡೆಯಲಾಗುತ್ತಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry