ಡಿಸಿ ವಿರುದ್ಧ ಬಂಧನ ವಾರೆಂಟ್

7

ಡಿಸಿ ವಿರುದ್ಧ ಬಂಧನ ವಾರೆಂಟ್

Published:
Updated:
ಡಿಸಿ ವಿರುದ್ಧ ಬಂಧನ ವಾರೆಂಟ್

ಉಡುಪಿ: ಬೆಂಗಳೂರಿನ ಕರ್ನಾಟಕ ಭೂ ಒತ್ತುವರಿ ವಿಶೇಷ ನ್ಯಾಯಾಲಯ ಉಡುಪಿ ಜಿಲ್ಲಾಧಿಕಾರಿ ಪ್ರಿಯಾಂಕ ಮೇರಿ ಫ್ರಾನ್ಸಿಸ್ ಅವರ ವಿರುದ್ಧ ಬಂಧನ ವಾರೆಂಟ್ ಹೊರಡಿಸಿದೆ.

ಒತ್ತುವರಿ ಪ್ರಕರಣಗಳನ್ನು ದಾಖಲಿಸುವುದು ಹಾಗೂ ವಿಚಾರಣೆಗೆ ಹಾಜರಾಗದ ಹಿನ್ನೆಲೆಯಲ್ಲಿ ಈ ಕ್ರಮ ಕೈಗೊಂಡಿದೆ. ವಾರೆಂಟ್‌ಅನ್ನು ಪಶ್ಚಿಮ ವಲಯ ಐಜಿಪಿ ಅವರಿಗೆ ಕಳುಹಿಸಿದೆ ಎಂದು ತಿಳಿದು ಬಂದಿದೆ.

ಈ ಬಗ್ಗೆ ‘ಪ್ರಜಾವಾಣಿ’ ಜತೆ ಮಾತನಾಡಿದ ಪ್ರಿಯಾಂಕ ಮೇರಿ ಫ್ರಾನ್ಸಿಸ್, ‘ನೋಟಿಸ್ ಬಂದಿದೆ. ಬಾಲಸುಬ್ರಮಣಿಯನ್ ಸಮಿತಿ ವರದಿ ಆಧರಿಸಿ ಒತ್ತುವರಿದಾರರ ವಿರುದ್ಧ ಪ್ರಕರಣ ದಾಖಲಿಸಬೇಕಿತ್ತು. ತಹಶೀಲ್ದಾರ್ ಅವರ ಮೂಲಕ ಪ್ರಕರಣ ದಾಖಲಿಸಲಾಗಿದೆ. ಈಗ ವಿಚಾರಣೆಗೆ ಹಾಜರಾಗುತ್ತೇನೆ. ಬಂಧನ ವಾರೆಂಟ್‌ ವಾಪಸ್ ಪಡೆಯುವಂತೆ ನಮ್ಮ ಪಬ್ಲಿಕ್ ಪ್ರಾಸಿಕ್ಯೂಟರ್ ಮೂಲಕ ಅರ್ಜಿ ಸಲ್ಲಿಸಲಾಗುವುದು’ ಎಂದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry