ಪಟ್ನಾ: ಟೀ–ಶರ್ಟ್‌, ಜೀನ್ಸ್‌ ತೊಟ್ಟು ಕಚೇರಿಗೆ ಬರುವಂತಿಲ್ಲ!

ಸೋಮವಾರ, ಮಾರ್ಚ್ 25, 2019
33 °C

ಪಟ್ನಾ: ಟೀ–ಶರ್ಟ್‌, ಜೀನ್ಸ್‌ ತೊಟ್ಟು ಕಚೇರಿಗೆ ಬರುವಂತಿಲ್ಲ!

Published:
Updated:
ಪಟ್ನಾ: ಟೀ–ಶರ್ಟ್‌, ಜೀನ್ಸ್‌ ತೊಟ್ಟು ಕಚೇರಿಗೆ ಬರುವಂತಿಲ್ಲ!

ಪಟ್ನಾ: ‘ಹಿರಿಯ ಹಾಗೂ ಕಿರಿಯ ಶ್ರೇಣಿ ಸಿಬ್ಬಂದಿ ಏಪ್ರಿಲ್‌ 1ರಿಂದ ಟೀ–ಶರ್ಟ್‌ ಹಾಗೂ ಜೀನ್ಸ್‌ ಧರಿಸಿಕೊಂಡು ಜಿಲ್ಲಾಧಿಕಾರಿ ಕಚೇರಿಗೆ ಬರಲು ಅವಕಾಶವಿಲ್ಲ. ಔಪಚಾರಿಕ ಉಡುಗೆ ಧರಿಸಿಕೊಂಡು ಬರಬೇಕು ಎಂದು ಜಿಲ್ಲಾ ಮ್ಯಾಜಿಸ್ಟ್ರೇಟ್‌ ಕುಮಾರ್‌ ರವಿ ತಿಳಿಸಿದ್ದಾರೆ.

ಬೋಧಗಯಾದಿಂದ ಪಟ್ನಾಕ್ಕೆ ಇತ್ತೀಚೆಗೆ ವರ್ಗಾವಣೆಯಾಗಿರುವ ರವಿ, ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಅನಿರೀಕ್ಷತ ಪರಿಶೀಲನೆ ನಡೆಸಿದ ನಂತರ ಈ ನಿರ್ಧಾರ ತೆಗೆದುಕೊಂಡಿದ್ದಾರೆ.

‘ಕೆಲಸ ಮಾಡುವ ಪದ್ಧತಿ ಸುಧಾರಿಸಲು ಈ ಕ್ರಮ ತೆಗೆದುಕೊಳ್ಳಲಾಗಿದೆ. ಪ್ರತಿಯೊಬ್ಬ ಸಿಬ್ಬಂದಿಯೂ ತಮ್ಮ ಕೊರಳಿನಲ್ಲಿ ಗುರುತಿನ ಚೀಟಿ ಹಾಕಿಕೊಂಡು ಬರಬೇಕು. ಮೇಜಿನ (ಟೇಬಲ್‌) ಮೇಲೆ ಆಯಾ ಅಧಿಕಾರಿಗಳ ಹೆಸರಿರುವ ನಾಮಫಲಕ ಇರಲೇಬೇಕು. ಇದರಿಂದ ಜನರು ತಮ್ಮ ಕೆಲಸಕ್ಕೆ ಸಂಬಂಧಪಟ್ಟವರನ್ನು ಸಂಪರ್ಕಿಸಲು ಸಹಾಯವಾಗುತ್ತದೆ. ಕೆಲಸದ ಸಂಸ್ಕೃತಿ ಬೆಳೆಸುವುದು ತಮ್ಮ ಉದ್ದೇಶ’ ಎಂದು ಅವರು ತಿಳಿಸಿದ್ದಾರೆ. ಸ್ವಚ್ಛ ಭಾರತ ಅಭಿಯಾನದಡಿಯಲ್ಲಿ ಸ್ವಚ್ಛತೆಗೆ ಎಲ್ಲರೂ ಸಹಕರಿಸಬೇಕು’ ಎಂದು ಹೇಳಿದ್ದಾರೆ

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry