4

ಭಾರತಿ, ಮುರಳಿಗೆ ಶ್ರೀಕೃಷ್ಣದೇವರಾಯ ಪುರಸ್ಕಾರ

Published:
Updated:
ಭಾರತಿ, ಮುರಳಿಗೆ ಶ್ರೀಕೃಷ್ಣದೇವರಾಯ ಪುರಸ್ಕಾರ

ಬೆಂಗಳೂರು: ತೆಲುಗು ವಿಜ್ಞಾನ ಸಮಿತಿ ಹಾಗೂ ಹೈದರಾಬಾದ್‌ನ ಟಿ.ಸುಬ್ಬರಾಮಿರೆಡ್ಡಿ ಲಲಿತಕಲಾ ಪರಿಷತ್‌ ಆಶ್ರಯದಲ್ಲಿ ನಗರದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ‘66ನೇ ಯುಗಾದಿ ಉತ್ಸವ’ದಲ್ಲಿ ನಟಿ ಭಾರತಿ ವಿಷ್ಣುವರ್ಧನ್‌ ಹಾಗೂ ತೆಲುಗು ನಟ, ಸಂಸದ ಮುರಳಿ ಮೋಹನ್‌ ಅವರಿಗೆ ‘ಶ್ರೀಕೃಷ್ಣದೇವರಾಯ ಪುರಸ್ಕಾರ’ ನೀಡಿ ಗೌರವಿಸಲಾಯಿತು. ರಾಜ್ಯಪಾಲ ವಜುಭಾಯಿ ವಾಲಾ ಪ್ರಶಸ್ತಿ ಪ್ರದಾನ ಮಾಡಿದರು.

‘ಈ ಪುರಸ್ಕಾರ ಇಡೀ ಚಿತ್ರರಂಗಕ್ಕೆ ಸಲ್ಲಬೇಕು. ನಾನು ಕಲಾವಿದೆಯಾಗಿ ರೂಪುಗೊಳ್ಳಲು ಅನೇಕರು ಕಾರಣ. ತಂದೆ–ತಾಯಿ, ಗುರುಗಳು, ಪತಿ ವಿಷ್ಣುವರ್ಧನ್‌ ಅವರಿಗೆ ಈ ಪುರಸ್ಕಾರವನ್ನು ಅರ್ಪಿಸುತ್ತೇನೆ’ ಎಂದು ಭಾರತಿ ವಿಷ್ಣುವರ್ಧನ್‌ ಹೇಳಿದರು.

ಮುರಳಿ ಮೋಹನ್‌, ‘ನನ್ನ ಮೊದಲ ಚಿತ್ರವನ್ನು ಕೊಡಗು, ಮೈಸೂರು, ಬೆಂಗಳೂರು ಭಾಗದಲ್ಲಿ ಚಿತ್ರೀಕರಿಸಲಾಗಿತ್ತು. ಹೀಗಾಗಿ ಕನ್ನಡ ಚಿತ್ರರಂಗದ ಮೇರು ಪ್ರತಿಭೆಗಳ ಪರಿಚಯವಾಗಿತ್ತು. ಇಂತಹ ನಾಡಿನಲ್ಲಿ ಪ್ರಶಸ್ತಿ ಸ್ವೀಕರಿಸುತ್ತಿರುವುದು ಖುಷಿಯಾಗಿದೆ. ಕರ್ನಾಟಕ ಹಾಗೂ ಆಂಧ್ರದ ಜನರು ಭೇದಭಾವವಿಲ್ಲದೆ ಸೋದರರಂತೆ ಬಾಳುತ್ತಿದ್ದಾರೆ. ಇದು ಹೀಗೆಯೇ ಮುಂದುವರಿಯಲಿ’ ಎಂದು ಆಶಿಸಿದರು.

‘ತೆಲುಗು ಶಾಲೆಗಳಿಗೆ ಶಿಕ್ಷಕರ ನೇಮಿಸಿ’

ರಾಜ್ಯದ 17 ಕಾಲೇಜುಗಳಲ್ಲಿ ತೆಲುಗು ಭಾಷೆಯನ್ನು ಕಲಿಸಲಾಗುತ್ತಿದೆ. 24 ತೆಲುಗು ಮಾಧ್ಯಮ ಶಾಲೆ ಹಾಗೂ ಅನುದಾನಿತ ಪ್ರೌಢಶಾಲೆಗಳು, 133 ಸರ್ಕಾರಿ ಹಾಗೂ ಅನುದಾನಿತ ಪ್ರಾಥಮಿಕ ಶಾಲೆಗಳಿವೆ. ಆದರೆ, ಶಿವಾಜಿನಗರ, ವಿವೇಕನಗರದ ಸರ್ಕಾರಿ ತೆಲುಗು ಶಾಲೆ ಹಾಗೂ ಬಿಇಎಲ್‌ ಎಜುಕೇಷನ್‌ ಕೌನ್ಸಿಲ್‌ನ ಶಾಲೆಗಳಲ್ಲಿ ಶಿಕ್ಷಕರ ಕೊರತೆ ಇದ್ದು, ಕೂಡಲೇ ನೇಮಿಸಬೇಕು ಎಂದು ಸಮಿತಿಯ ಅಧ್ಯಕ್ಷ ಡಾ.ಎ.ರಾಧಾಕೃಷ್ಣ ರಾಜು ಒತ್ತಾಯಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry