ಇಂದು ರಾತ್ರಿ 10.15ಕ್ಕೆ ಕೊನೆಯ ಮೆಟ್ರೊ ರೈಲು ಸಂಚಾರ

7

ಇಂದು ರಾತ್ರಿ 10.15ಕ್ಕೆ ಕೊನೆಯ ಮೆಟ್ರೊ ರೈಲು ಸಂಚಾರ

Published:
Updated:
ಇಂದು ರಾತ್ರಿ 10.15ಕ್ಕೆ ಕೊನೆಯ ಮೆಟ್ರೊ ರೈಲು ಸಂಚಾರ

ಬೆಂಗಳೂರು: ಹಳಿಗಳ ನಿರ್ವಹಣಾ ಕಾಮಗಾರಿ ಸಲುವಾಗಿ ಇದೇ 10ರಂದು (ಶನಿವಾರ) ‘ನಮ್ಮ ಮೆಟ್ರೊ’ ಸೇವೆ ರಾತ್ರಿ ಒಂದು ಗಂಟೆ ಮುಂಚಿತವಾಗಿ ಕೊನೆಗೊಳ್ಳಲಿದೆ.

ಟರ್ಮಿನಲ್‌ ನಿಲ್ದಾಣಗಳಲ್ಲಿ (ಬೈಯಪ್ಪನಹಳ್ಳಿ, ಮೈಸೂರು ರಸ್ತೆ, ನಾಗಸಂದ್ರ ಹಾಗೂ ಯಲಚೇನಹಳ್ಳಿ) ರಾತ್ರಿ 11 ಗಂಟೆಗೆ ಬದಲು 10.15ಕ್ಕೆ ದಿನದ ಕೊನೆಯ ರೈಲು ಹೊರಡಲಿದೆ.

ಭಾನುವಾರ ಬೆಳಿಗ್ಗೆ 10.30ರಿಂದ ಮೆಟ್ರೊ: ಪ್ರತಿ ಭಾನುವಾರ ಮೆಟ್ರೊ ಸೇವೆ ಬೆಳಿಗ್ಗೆ 8 ಗಂಟೆಯಿಂದ ಆರಂಭವಾಗುತ್ತದೆ. ಆದರೆ ಇದೇ 11ರಂದು ಬೆಳಿಗ್ಗೆ 10.30ರ ಬಳಿಕ ಆರಂಭವಾಗಲಿದೆ ಎಂದು ಬಿಎಂಆರ್‌ಸಿಎಲ್‌ ಪ್ರಕಟಣೆ ತಿಳಿಸಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry