ವಿದ್ಯಾರ್ಥಿಗೆ ಕಮಿಷನರ್ ಸೆಲ್ಯೂಟ್!

7

ವಿದ್ಯಾರ್ಥಿಗೆ ಕಮಿಷನರ್ ಸೆಲ್ಯೂಟ್!

Published:
Updated:
ವಿದ್ಯಾರ್ಥಿಗೆ ಕಮಿಷನರ್ ಸೆಲ್ಯೂಟ್!

ಬೆಂಗಳೂರು: ಮಲ್ಯ ಆಸ್ಪತ್ರೆ ಬಳಿ ಶಾಲಾ ವಿದ್ಯಾರ್ಥಿಯೊಬ್ಬ ಸೆಲ್ಯೂಟ್‌ ಮಾಡಿದ್ದಕ್ಕೆ ಪ್ರತಿಯಾಗಿ ನಗರ ಪೊಲೀಸ್ ಕಮಿಷನರ್ ಟಿ.ಸುನೀಲ್ ಕುಮಾರ್ ಸಹ ಸೆಲ್ಯೂಟ್ ಮಾಡಿದ್ದಾರೆ.

ಸ್ಥಳದಲ್ಲಿದ್ದ ಮಾಧ್ಯಮದವರು ಆ ದೃಶ್ಯವನ್ನು ಚಿತ್ರೀಕರಿಸಿದ್ದು, ಅದರ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಕಮಿಷನರ್ ನಡೆಗೆ ಸಾಮಾಜಿಕ ಜಾಲತಾಣದಲ್ಲಿ ಮೆಚ್ಚುಗೆ ವ್ಯಕ್ತವಾಗಿದೆ.

ಹಲ್ಲೆಗೊಳಗಾಗಿರುವ ಲೋಕಾಯುಕ್ತ ಪಿ. ವಿಶ್ವನಾಥ್‌ ಶೆಟ್ಟಿ ಅವರು ಮಲ್ಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಅವರ ಆರೋಗ್ಯ ವಿಚಾರಿಸಲು ಕಮಿಷನರ್ ಆಸ್ಪತ್ರೆಗೆ ಹೋಗಿದ್ದರು. ಆಸ್ಪತ್ರೆಯಿಂದ ಹೊರಬರುತ್ತಿದ್ದ ವೇಳೆ ವಿದ್ಯಾರ್ಥಿ ಸೆಲ್ಯೂಟ್‌ ಮಾಡಿದ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry