ವೆಂಗ್‌ಸರ್ಕಾರ್ ಸುಳ್ಳುಗಾರ: ಶ್ರೀನಿವಾಸನ್‌ ಆರೋಪ

7

ವೆಂಗ್‌ಸರ್ಕಾರ್ ಸುಳ್ಳುಗಾರ: ಶ್ರೀನಿವಾಸನ್‌ ಆರೋಪ

Published:
Updated:
ವೆಂಗ್‌ಸರ್ಕಾರ್ ಸುಳ್ಳುಗಾರ: ಶ್ರೀನಿವಾಸನ್‌ ಆರೋಪ

ಚೆನ್ನೈ: ಭಾರತ ಕ್ರಿಕೆಟ್ ತಂಡದ ಆಯ್ಕೆ ಸಮಿತಿ ಅಧ್ಯಕ್ಷರಾಗಿದ್ದ ದಿಲೀಪ್ ವೆಂಗ್‌ಸರ್ಕಾರ್ ಸುಳ್ಳುಗಾರ ಎಂದು ಬಿಸಿಸಿಐ ಅಧ್ಯಕ್ಷರಾಗಿದ್ದ ಎನ್‌.ಶ್ರೀನಿವಾಸನ್‌ ಆರೋಪಿಸಿದರು.

ತಮಿಳುನಾಡಿನ ಎಸ್‌.ಬದರಿನಾಥ್‌ ಬದಲಿಗೆ ವಿರಾಟ್ ಕೊಹ್ಲಿ ಅವರನ್ನು ತಂಡಕ್ಕೆ ಆಯ್ಕೆ ಮಾಡಿದ್ದರಿಂದ ಆಯ್ಕೆ ಸಮಿತಿ ಅಧ್ಯಕ್ಷ ಸ್ಥಾನ ಕಳೆದುಕೊಳ್ಳಬೇಕಾಗಿತ್ತು ಎಂದು ವೆಂಗ್‌ಸರ್ಕಾರ್‌ ಗುರುವಾರ ಆರೋಪಿಸಿದ್ದರು. ಇದರ ಹಿಂದೆ ಎನ್‌.ಶ್ರೀನಿವಾಸನ್ ಅವರ ಕೈವಾಡ ಇತ್ತು ಎಂದು ಕೂಡ ದೂರಿದ್ದರು.

ಇದಕ್ಕೆ ಪ್ರತಿಕ್ರಿಯಿಸಿದ ಶ್ರೀನಿವಾಸನ್‌ ‘ಅವರು ಯಾರಿಗಾಗಿ ಈ ಹೇಳಿಕೆ ನೀಡಿದ್ದಾರೆ ಎಂಬುದೇ ತಿಳಿಯುತ್ತಿಲ್ಲ. ಅವರು ಹೇಳಿದ್ದೆಲ್ಲವೂ ಸುಳ್ಳು. ಕ್ರಿಕೆಟಿಗನೊಬ್ಬ ಹೀಗೆಲ್ಲ ಮಾತನಾಡುವುದು ಸರಿಯಲ್ಲ’ ಎಂದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry