ಪಲ್ಸ್‌ ಪೋಲಿಯೊ ಅಭಿಯಾನ: ಪೂರ್ವಭಾವಿ ಸಭೆ

7

ಪಲ್ಸ್‌ ಪೋಲಿಯೊ ಅಭಿಯಾನ: ಪೂರ್ವಭಾವಿ ಸಭೆ

Published:
Updated:
ಪಲ್ಸ್‌ ಪೋಲಿಯೊ ಅಭಿಯಾನ: ಪೂರ್ವಭಾವಿ ಸಭೆ

ಮೊಳಕಾಲ್ಮುರು: ಮಾರ್ಚ್‌ 11ರಂದು ನಡೆಯುವ ರಾಷ್ಟ್ರೀಯ ಪಲ್ಸ್‌ ಪೋಲಿಯೊ ಅಭಿಯಾನವನ್ನು ತಾಲ್ಲೂಕಿನಲ್ಲಿ ಯಶಸ್ವಿಯಾಗಿ ನಡೆಸಲು ಸಿದ್ಧತೆ ಮಾಡಿಕೊಳ್ಳಲಾಗಿದೆ ಎಂದು ತಾಲ್ಲೂಕು ಆರೋಗ್ಯಾಧಿಕಾರಿ ಡಾ.ತುಳಸಿ ರಂಗನಾಥ್ ತಿಳಿಸಿದರು.

ತಾಲ್ಲೂಕು ಕಚೇರಿಯಲ್ಲಿ ಶುಕ್ರವಾರ ಏರ್ಪಡಿಸಿದ್ದ ಪೂರ್ವಭಾವಿ ಸಭೆಯಲ್ಲಿ ಅವರು ಮಾತನಾಡಿದರು.

ಈ ಬಾರಿ ಐದು ವರ್ಷದೊಳಗಿನ ಒಟ್ಟು 16,707 ಮಕ್ಕಳಿಗೆ ಪೋಲಿಯೊ ಲಸಿಕೆ ಹಾಕುವ ಗುರಿ ಹೊಂದಲಾಗಿದೆ. ಇದಕ್ಕಾಗಿ 78 ಲಸಿಕಾ ಕೇಂದ್ರಗಳನ್ನು ತೆರೆಯಲಾಗಿದೆ. 25 ಆರೋಗ್ಯ ಸಹಾಯಕಿಯರು, 108 ಆಶಾ ಕಾರ್ಯಕರ್ತೆಯರು, 37 ಅಂಗನವಾಡಿ ಕಾರ್ಯಕರ್ತೆಯರು ಒಳಗೊಂಡಂತೆ ಒಟ್ಟು 170 ಜನರನ್ನು ಬಳಸಿಕೊಳ್ಳಲಾಗುತ್ತಿದೆ ಎಂದು ಹೇಳಿದರು.

ವಲಸೆ ಬಂದವರು, ಕೂಲಿ ಕಾರ್ಮಿಕರು, ಇಟ್ಟಿಗೆ ಬಟ್ಟಿ ಪ್ರದೇಶಗಳಲ್ಲಿನ ಕಾರ್ಮಿಕರ ಒಟ್ಟು 2,336 ಮಕ್ಕಳಿಗೆ ಲಸಿಕೆ ಹಾಕುವ ಗುರಿಯಿದೆ. ಇದನ್ನು ಸಾಧಿಸಲು ಸಿದ್ಧತೆ ಮಾಡಿಕೊಳ್ಳಲಾಗಿದೆ ಎಂದರು.

ಶಿಶು ಅಭಿವೃದ್ಧಿ ಅಧಿಕಾರಿ ಜಿ.ಹೊನ್ನಪ್ಪ, ದೈಹಿಕ ಶಿಕ್ಷಣ ಸಂಯೋಜಕ ಹನುಮಂತಪ್ಪ, ಆರೋಗ್ಯ ಶಿಕ್ಷಣಾಧಿಕಾರಿ ಚಿದಾನಂದಪ್ಪ ಅವರೂ ಇದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry