ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದಲಿತ ಕುಟುಂಬಗಳಿಗೆ ಮನೆ: ಭರವಸೆ

11 ದಿನಗಳ ಅಹೋರಾತ್ರಿ ಧರಣಿ ಅಂತ್ಯಗೊಳಿಸಿದ ರೈತ ಸಂಘ
Last Updated 10 ಮಾರ್ಚ್ 2018, 6:51 IST
ಅಕ್ಷರ ಗಾತ್ರ

ಸುರಪುರ: ತಾಲ್ಲೂಕಿನ 10 ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿನ ನಿರಾಶ್ರಿತ ದಲಿತ ಕುಟುಂಬಗಳಿಗೆ ಅಮಿತಿ ಯೋಜನೆಯಡಿ ಮನೆಗಳನ್ನು ನೀಡುವಂತೆ ಒತ್ತಾಯಿಸಿ ಕರ್ನಾಟಕ ಪ್ರಾಂತ ರೈತ ಸಂಘ ತಾಲ್ಲೂಕು ಪಂಚಾಯಿತಿ ಕಚೇರಿ ಎದುರು 11 ದಿನಗಳ ಕಾಲ ನಡೆಸಿದ ಅಹೋರಾತ್ರಿ ಧರಣಿ ಶುಕ್ರವಾರ ಅಂತ್ಯಗೊಳಿಸಿತು.

ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಯಲ್ಲಪ್ಪ ಚಿನ್ನಾಕಾರ ಮಾತನಾಡಿ, ‘ನಿರಾಶ್ರಿತ ಬಡ ದಲಿತರಿಗೆ ಮನೆ ನೀಡುವಂತೆ ನಿರಂತರ ಮನವಿ ಮಾಡಿದೆವು. ನಮ್ಮ ಪ್ರತಿಭಟನೆಗೆ ಮಣಿದು ಎಲ್ಲರಿಗೂ ಮನೆ ನೀಡುವು ದಾಗಿ ತಾಲ್ಲೂಕು ಪಂಚಾಯಿತಿ ಇಒ ಜಗದೇವಪ್ಪ ಅವರು ಲಿಖಿತ ಭರವಸೆ ನೀಡಿದ ಹಿನ್ನೆಲೆಯಲ್ಲಿ ಧರಣಿ ಹಿಂಪಡೆದೆವು’ ಎಂದರು.

ಜಗದೇವಪ್ಪ ಮಾತ ನಾಡಿ,‘ಕೆಲ ಕುಟುಂಬಗಳಿಗೆ ಮನೆಗಳ ಜಿಪಿಎಸ್ ಮಾಡಿಕೊಡಲಾಗಿದೆ. ಉಳಿದವರಿಗೂ ಶೀಘ್ರವೇ ಸ್ಥಳ ಪರಿಶೀಲಿಸಿ, ಮನೆಗಳನ್ನು ಕಲ್ಪಿಸಲಾಗುವುದು’ ಎಂದರುವಿವಿಧ ಸಂಘಟನೆಗಳ ಮುಖಂಡರಾದ ಅಹಮದ್ ಪಠಾಣ, ಭೀಮರಾಯ ಸಿಂಧಗೇರಿ, ಲಕ್ಷ್ಮಣ ಕಟ್ಟಿಮನಿ, ಸಂಘದ ತಾಲ್ಲೂಕು ಘಟಕದ ಅಧ್ಯಕ್ಷ ಧರ್ಮಣ್ಣ ದೊರೆ, ನಿಂಗಣ್ಣ ಬೈಲಾಪೂರ, ಶಬ್ಬಿರಖಾನ ಅಡ್ಡೋಡಗಿ, ಮಲ್ಲನಗೌಡ ಗೌಡಗೇರಿ, ಮುದಕಪ್ಪ ಕುಪಗಲ್, ಚಂದ್ರಾಮಗೌಡ, ರಾಮಯ್ಯ ಬೋವಿ, ಸಿದ್ದಲಿಂಗಯ್ಯ ವಗ್ಗಾ, ರಮೇಶ ಬಡಿಗೇರ ಮುಂತಾದವರು ಧರಣಿಯಲ್ಲಿ ಪಾಲ್ಗೊಂಡಿದ್ದರು.
*****
ನಿರಾಶ್ರಿತ ಬಡ ದಲಿತರಿಗೆ ಮನೆ ನೀಡುವಂತೆ ನಿರಂತರ ಮನವಿ ಮಾಡಿದೆವು. ಸರ್ಕಾರದ ಮೇಲೆ ಒತ್ತಡ ಹೇರಲು ಪ್ರಯತ್ನಿಸಿದೆವು. ಬೇಡಿಕೆಗೆ ಸ್ಪಂದನೆ ಸಿಕ್ಕಿರುವುದು ಖುಷಿ ತಂದಿದೆ.
– ಯಲ್ಲಪ್ಪ ಚಿನ್ನಾಕಾರ,ಅಧ್ಯಕ್ಷ, ಕರ್ನಾಟಕ ಪ್ರಾಂತ ರೈತ ಸಂಘ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT