ತಪ್ಪಿದ ದುರಂತ: ಟ್ರಾಫಿಕ್ ಜಾಮ್‌

7

ತಪ್ಪಿದ ದುರಂತ: ಟ್ರಾಫಿಕ್ ಜಾಮ್‌

Published:
Updated:

ಹೊಳೆನರಸೀಪುರ: ರೈಲುಗಳು ಮುಖಾಮುಖಿಯಾಗಿ ಸಂಭವಿಸ ಬಹುದಾಗಿದ್ದ ದುರಂತ ಒಬ್ಬ ಚಾಲಕನ ಸಮಯಪ್ರಜ್ಞೆಯಿಂದ ತಪ್ಪಿದೆ.

ಪಟ್ಟಣದ ಹೊರವಲಯದಲ್ಲಿರುವ ರಸ್ತೆ ಮಾರ್ಗದ ಹಾಸನ–ಮೈಸೂರು ಮತ್ತು ಚನ್ನರಾಯಪಟ್ಟಣ–ಹೊಳೆನರಸೀಪುರ ಗೇಟ್‌ಗಳನ್ನು ಬಂದ್ ಮಾಡಲಾಗಿತ್ತು. ಕಿಲೋ ಮೀಟರ್‌ಗಟ್ಟಲೇ ವಾಹನಗಳು ನಿಂತಿವೆ.

ಮೈಸೂರು– ಅರಸೀಕೆರೆ ಹಾಗೂ ಅರಸೀಕೆರೆ– ಮೈಸೂರು ರೈಲುಗಳು ಅಪಘಾತವಾಗುವುದು ಅರಸೀಕೆರೆ– ಮೈಸೂರು ರೈಲಿನ ಚಾಲಕನ ಸಮಯಪ್ರಜ್ಞೆಯಿಂದ ತಪ್ಪಿದೆ. ಮೈಸೂರು– ಅರಸೀಕೆರೆ ರೈಲ್‌ನ್ನು ಹೊಳೆನರಸೀಪುರದಲ್ಲಿ ನಿಲ್ಲಿಸಲಾಗಿದ್ದು, ಅರಸೀಕೆರೆ–ಮೈಸೂರು ರೈಲು ಹೊರವಲಯದಲ್ಲಿ ನಿಂತಿದೆ. ತಪ್ಪಿತಸ್ಥ ಚಾಲಕನ ವಿರುದ್ಧ ಕ್ರಮ ಕೈಗೊಳ್ಳಲು ಶಿಫಾರಸು ಮಾಡಲಾಗುವುದು ಎಂದು ರೈಲ್ವೆ ಅಧಿಕಾರಿಗಳು ತಿಳಿಸಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry