ಈಶಾನ್ಯ ರಾಜ್ಯಗಳ ಫಲಿತಾಂಶ ರಾಜ್ಯಕ್ಕೆ ದಿಕ್ಸೂಚಿ: ಸಂಸದ ಉದಾಸಿ

ಮಂಗಳವಾರ, ಮಾರ್ಚ್ 26, 2019
26 °C
‘ನವ ಕರ್ನಾಟಕ ನಿರ್ಮಾಣಕ್ಕಾಗಿ ನವಶಕ್ತಿ ನಿರ್ಮಾಣ’ ಕಾರ್ಯಕ್ರಮ

ಈಶಾನ್ಯ ರಾಜ್ಯಗಳ ಫಲಿತಾಂಶ ರಾಜ್ಯಕ್ಕೆ ದಿಕ್ಸೂಚಿ: ಸಂಸದ ಉದಾಸಿ

Published:
Updated:
ಈಶಾನ್ಯ ರಾಜ್ಯಗಳ ಫಲಿತಾಂಶ ರಾಜ್ಯಕ್ಕೆ ದಿಕ್ಸೂಚಿ: ಸಂಸದ ಉದಾಸಿ

ಹಾನಗಲ್: ‘ತ್ರಿಪುರಾ ಸೇರಿದಂತೆ ಈಶಾನ್ಯ ರಾಜ್ಯಗಳ ಚುನಾವಣಾ ಫಲಿತಾಂಶವು ಕರ್ನಾಟಕ ವಿಧಾನಸಭಾ ಚುನಾವಣೆಗೆ ದಿಕ್ಸೂಚಿಯಾಗಲಿದೆ’ ಎಂದು ಸಂಸದ ಶಿವಕುಮಾರ ಉದಾಸಿ ಭವಿಷ್ಯ ನುಡಿದರು.

ಇಲ್ಲಿನ ಕುಮಾರೇಶ್ವರ ವಿರಕ್ತಮಠದ ಆವರಣದಲ್ಲಿ ಶುಕ್ರವಾರ ನಡೆದ ‘ನವ ಕರ್ನಾಟಕ ನಿರ್ಮಾಣಕ್ಕಾಗಿ ನವಶಕ್ತಿ ನಿರ್ಮಾಣ’ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

‘ಬಿಜೆಪಿ ನೇತೃತ್ವದ ಸರ್ಕಾರ ಹೊಂದಿರುವ ರಾಜ್ಯಗಳಲ್ಲಿ ಕೇಂದ್ರದ ಯೋಜನೆಗಳು ಪರಿಣಾಮಕಾರಿಯಾಗಿ ಅನುಷ್ಠಾನಗೊಂಡು ಜನರನ್ನು ತಲುಪು ತ್ತಿವೆ. ಆದರೆ ರಾಜ್ಯ ಸರ್ಕಾರ ಕೇಂದ್ರದ ಯೋಜನೆಗಳತ್ತ ನಿರ್ಲಕ್ಷ್ಯ ತೋರುತ್ತಿದೆ’ ಎಂದು ಆರೋಪಿಸಿದರು.

‘ಕೇಂದ್ರದ ಕೃಷಿ ಸಂಚಯಿನಿ ಯೋಜನೆ ಅಡಿಯಲ್ಲಿ ಹಾವೇರಿ ಜಿಲ್ಲೆಗೆ ಕೃಷಿ ಅನುಕೂಲಕ್ಕಾಗಿ ₹ 70.77 ಕೋಟಿ ಅನುದಾನ ಮಂಜೂರಾಗಿದೆ. ತೋಟಗಾರಿಕೆ ವ್ಯವಸ್ಥೆಗಾಗಿ ₹ 65 ಕೋಟಿ ಮಂಜೂರಾಗಿದೆ. ಒಟ್ಟು ₹ 131 ಕೋಟಿ ಜಿಲ್ಲೆಗೆ (ಹಾನಗಲ್‌ ತಾಲ್ಲೂಕಿಗೆ ₹ 5.76 ಕೋಟಿ ) ಬಿಡುಗಡೆಗೊಂಡಿದೆ. ರಾಜ್ಯ ಸರ್ಕಾರ ಈ ಅನುದಾನ ಬಳಕೆಯಲ್ಲಿ ವಿಫಲವಾಗುತ್ತಿದೆ’ ಎಂದರು.

ರಾಜ್ಯ ಬಿಜೆಪಿ ಘಟಕದ ಉಪಾಧ್ಯಕ್ಷ ಡಾ. ಎಂ. ನಾಗರಾಜ, ಜಿಲ್ಲಾ ಘಟಕದ ಅಧ್ಯಕ್ಷ ಶಿವರಾಜ ಸಜ್ಜನರ, ತಾಲ್ಲೂಕು ಘಟಕದ ಅಧ್ಯಕ್ಷ ನಿಂಗಪ್ಪ ಗೊಬ್ಬೇರ, ಬಿಜೆಪಿ ಮುಖಂಡ ಸಿ.ಎಂ. ಉದಾಸಿ, ವಿಭಾಗೀಯ ಪ್ರಾಂತ್ಯ ಸಂಘಟನಾ ಕಾರ್ಯದರ್ಶಿ ಜಯತೀರ್ಥ ಆಚಾರ ಕಟ್ಟಿ, ಸುನಿಲ ಪರ್ಸೇಕರ, ಜಿಲ್ಲಾ ಘಟಕದ ಸಿದ್ಧರಾಜ ಕಲಕೋಟಿ, ಸಂತೋಷ ಪಾಟೀಲ ಇದ್ದರು.

**

ಕೇಂದ್ರದಿಂದ ರಸ್ತೆ ನಿರ್ಮಾಣ, ಕೃಷಿ ಸಂಚಯಿನಿಗೆ ಅನುದಾನ ಮತ್ತು ಉಜ್ವಲ ಯೋಜನೆಗಳ ಲಾಭ ರಾಜ್ಯದಲ್ಲಿಯೇ ಹಾವೇರಿ ಲೋಕಸಭಾ ಕ್ಷೇತ್ರಕ್ಕೆ ಹೆಚ್ಚು ದಕ್ಕಿದೆ.

–ಶಿವಕುಮಾರ ಉದಾಸಿ, ಸಂಸದ

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry