‘ಗೋವು, ಮಾರಾಟದ ಸರಕಾಗದಿರಲಿ’

7

‘ಗೋವು, ಮಾರಾಟದ ಸರಕಾಗದಿರಲಿ’

Published:
Updated:
‘ಗೋವು, ಮಾರಾಟದ ಸರಕಾಗದಿರಲಿ’

ಸಿದ್ದಾಪುರ: ‘ಗೋವಿನ ಉತ್ಪನ್ನಗಳ ವ್ಯಾಪಾರ ನಡೆಸಬಹುದು. ಅದಕ್ಕೆ ಬದಲಾಗಿ ಗೋವನ್ನೆ ವ್ಯಾಪಾರದ ಸರಕಾಗಿ ಕಾಣುವುದು ಸರಿಯಲ್ಲ’ ಎಂದು ಬಾಡದಬೈಲ್ ನಂದಿಗುಡಿ ಶಿವಾಚಾರ್ಯ ಸ್ವಾಮೀಜಿ ಹೇಳಿದರು.

ತಾಲ್ಲೂಕಿನ ಬಾನ್ಕುಳಿಮಠದಲ್ಲಿ ಗುರುವಾರ ‘ಗೋಸ್ವರ್ಗ’( ಗೋಶಾಲೆ)ನಿರ್ಮಾಣದ ಶಿಲಾನ್ಯಾಸ ಬಳಿಕ ನಡೆದ ಸಭೆಯಲ್ಲಿ ಮಾತನಾಡಿದರು.

‘ರಾಘವೇಶ್ವರ ಸ್ವಾಮೀಜಿ ಅವರ ಗೋ ಸ್ವರ್ಗದ ಕಲ್ಪನೆ ಉತ್ತಮವಾಗಿದೆ. ಇದರಿಂದ ಭಾರತೀಯ ಗೋ ತಳಿಗಳ ರಕ್ಷಣೆ ಹಾಗೂ ಉಳಿವು ಸಾಧ್ಯವಾಗುತ್ತದೆ’ ಎಂದರು.

ಮುಖ್ಯ ಅತಿಥಿಯಾಗಿದ್ದ ಸಾಮಾಜಿಕ ಕಾರ್ಯಕರ್ತ ಶಶಿಭೂಷಣ ಹೆಗಡೆ ಮಾತನಾಡಿ, ‘ಗೋ ಸ್ವರ್ಗ ನಿರ್ಮಾಣಕ್ಕೆ ಕೇಂದ್ರ ಸರ್ಕಾರದಿಂದ ಹೆಚ್ಚಿನ ಸಹಾಯಧನ ಪಡೆಯಲು ಸಾಧ್ಯವಿದೆ. ಇದು ರಾಷ್ಟ್ರೀಯ ಮಹತ್ವದ ಕೆಲಸ’ ಎಂದರು.

ರಾಮಚಂದ್ರಪುರ ಮಠದ ಕಾಮದುಘಾ ಘಟಕದ ಅಧ್ಯಕ್ಷ ಡಾ.ವೈ.ವಿ.ಕೃಷ್ಣಮೂರ್ತಿ ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾ ಪಂಚಾಯ್ತಿ ಸದಸ್ಯ ನಾಗರಾಜ ನಾಯ್ಕ ಹಾಗೂ ಸಾಮಾಜಿಕ ಕಾರ್ಯಕರ್ತ ವಿ.ಎನ್.ನಾಯ್ಕ ಬೇಡ್ಕಣಿ ಮಾತನಾಡಿದರು. ಕೆಡಿಸಿಸಿ ಬ್ಯಾಂಕ್ ನಿರ್ದೇಶಕ ಎಸ್‌.ಬಿ.ಗೌಡರ್ ,ಟಿಎಂಎಸ್ ಅಧ್ಯಕ್ಷ ಆರ್.ಎಂ.ಹೆಗಡೆ ಬಾಳೇಸರ , ಹನುಮಂತ ನಾಯ್ಕ ಹುಲಿಮನೆ ಇದ್ದರು.

**

ಗೋವನ್ನು ಸಾಕುವುದರಿಂದ ಅದರ ಉತ್ಪನ್ನಗಳನ್ನು ಪಡೆಯುವ ಮೂಲಕ ಲಾಭ ಪಡೆಯಬಹುದು. ಗೋ ಮಾತೆಯ ಸೇವೆಯಿಂದ ಪುಣ್ಯವೂ ಬರುತ್ತದೆ

–ನಂದಿಗುಡಿ ಶಿವಾಚಾರ್ಯ ಸ್ವಾಮೀಜಿ, ಬಾಡದಬೈಲ್ ಮಠಾಧೀಶ

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry