5

10 ವಿದ್ಯಾರ್ಥಿನಿಯರಿಗೆ ಕಾಲೇಜಿಗೆ ಉಚಿತ ಪ್ರವೇಶ

Published:
Updated:

ರಾಯಚೂರು: ಆರ್ಥಿಕವಾಗಿ ಹಿಂದುಳಿದ 10 ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಉಚಿತವಾಗಿ ಪ್ರವೇಶ ನೀಡಲಾಗುತ್ತದೆ ಎಂದು ಆಪ್‌ಟೈಮ್‌ ಆಡಳಿತ ಮಂಡಳಿ ಕಾರ್ಯದರ್ಶಿ ರಾಕೇಶ ರಾಜಲಬಂಡಿ ಹೇಳಿದರು.

ನಗರದ ವೆಂಕಟೇಶ್ವರ ಪದವಿ ಪೂರ್ವ ಮತ್ತು ಪದವಿ ಕಾಲೇಜಿನಿಂದ ಗುರುವಾರ ಆಯೋಜಿಸಿದ್ದ ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆಯಲ್ಲಿ ಮಾತನಾಡಿದರು.

ಪ್ರಾಂಶುಪಾಲ ಶರಣಪ್ಪ ಪಾಟೀಲ ಮಾತನಾಡಿ, ಆಧುನಿಕ ದಿನಗಳಲ್ಲಿ ಮಹಿಳೆಯರು ಎಲ್ಲಾ ಕ್ಷೇತ್ರಗಳಲ್ಲಿ ಮುಂದೆ ಬಂದಿದ್ದಾರೆ. ಒಬ್ಬ ಮಹಿಳೆ ಹತ್ತು ಜನ ಪುರುಷರಿಗೆ ಸಮನಾಗಿದ್ದಾಳೆ. ಆಕೆ ಮಹತ್ಸಾಧನೆ ಮಾಡಬಲ್ಲಳು ಎಂದು ಹೇಳಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry