7

ರಾಮನಗರದ ಗುರುಭವನದಲ್ಲಿ ಗಾಂಧಿ ಕುರಿತ ಧ್ವನಿ ಬೆಳಕು ಕಾರ್ಯಕ್ರಮ

Published:
Updated:
ರಾಮನಗರದ ಗುರುಭವನದಲ್ಲಿ ಗಾಂಧಿ ಕುರಿತ ಧ್ವನಿ ಬೆಳಕು ಕಾರ್ಯಕ್ರಮ

ರಾಮನಗರ: ಮಹಾತ್ಮ ಗಾಂಧೀಜಿ ಅವರ 150ನೇ ಜನ್ಮ ವರ್ಷಾಚರಣೆಯ ಅಂಗವಾಗಿ ಶುಕ್ರವಾರ ಗುರುಭವನದಲ್ಲಿ ಗಾಂಧೀಜಿ ಅವರ ಜೀವನ ಮತ್ತು ಸಾಧನೆಗಳ ಕುರಿತು ಧ್ವನಿ ಮತ್ತು ಬೆಳಕು ಕಾರ್ಯಕ್ರಮ ನಡೆಯಿತು.

ಗಾಂಧೀಜಿ ಅವರು ಬ್ರಿಟಿಷರ ವಿರುದ್ಧ ಶಾಂತಿಯುತವಾಗಿ ನಡೆಸಿದ ಹೋರಾಟಗಳು, ಈ ಹಾದಿಯಲ್ಲಿ ಬರುವ ಪ್ರಮುಖ ಘಟನಾವಳಿಗಳನ್ನು ದೃಶ್ಯಗಳ ಮೂಲಕ ಕಟ್ಟಿಕೊಡಲಾಯಿತು. ಜಲಿಯನ್ ವಾಲಾಬಾಗ್ ದುರಂತ, ದಂಡಿ ಸತ್ಯಾಗ್ರಹ, ಕ್ವಿಟ್ ಇಂಡಿಯಾ ಚಳವಳಿ ಮುಂತಾದ ಸಂದರ್ಭಗಳಲ್ಲಿ ಗಾಂಧೀಜಿ ಅವರು ರೂಪಿಸಿದ ಹೋರಾಟಗಳು ಹಾಗೂ ದಕ್ಷಿಣ ಆಫ್ರಿಕಾದಲ್ಲಿ ಅವರು ನಡೆಸಿದ ಹೋರಾಟಗಳನ್ನು ಈ ಧ್ವನಿ ಮತ್ತು ಬೆಳಕು ಕಾರ್ಯಕ್ರಮದಲ್ಲಿ ಪ್ರಸ್ತುತಪಡಿಸಲಾಯಿತು.

ಕನ್ನಡ ಮತ್ತು ಸಂಸ್ಕತಿ ಇಲಾಖೆಯ ಸಹಾಯಕ ನಿರ್ದೇಶಕ ಎಂ.ರಾಜು, ಕ್ಷೇತ್ರ ಶಿಕ್ಷಣಾಧಿಕಾರಿ ಮರಿಗೌಡ, ಕಾಲೇಜಿನ ಉಪ ಪ್ರಾಚಾರ್ಯಚಿನ್ನಸ್ವಾಮಿ ಹಾಗೂ ಟಿ.ಸಿ. ಸರಳಾಕುಮಾರಿ ಇದ್ದರು. ನೂರಾರು ವಿದ್ಯಾರ್ಥಿಗಳು ಕಾರ್ಯಕ್ರಮ ವೀಕ್ಷಿಸಿದರು.

ಬೆಂಗಳೂರಿನ ಗಾಂಧಿ ಸ್ಮಾರಕ ನಿಧಿ ಹಾಗೂ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯಿಂದ ಕಾರ್ಯಕ್ರಮ ರೂಪಿಸಲಾಗಿತ್ತು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry