ಸುರೇಶ್‌ ಪ್ರಭುಗೆ ನಾಗರಿಕ ವಿಮಾನಯಾನ ಖಾತೆಯ ಹೆಚ್ಚುವರಿ ಹೊಣೆ

7

ಸುರೇಶ್‌ ಪ್ರಭುಗೆ ನಾಗರಿಕ ವಿಮಾನಯಾನ ಖಾತೆಯ ಹೆಚ್ಚುವರಿ ಹೊಣೆ

Published:
Updated:
ಸುರೇಶ್‌ ಪ್ರಭುಗೆ ನಾಗರಿಕ ವಿಮಾನಯಾನ ಖಾತೆಯ ಹೆಚ್ಚುವರಿ ಹೊಣೆ

ನವದೆಹಲಿ: ತೆಲುಗುದೇಶಂ ಪಕ್ಷದ (ಟಿಡಿಪಿ) ಅಶೋಕ್ ಗಜಪತಿ ರಾಜು ಅವರ ರಾಜೀನಾಮೆಯಿಂದ ತೆರವಾಗಿರುವ ನಾಗರಿಕ ವಿಮಾನಯಾನ ಖಾತೆಯ ಹೊಣೆಯನ್ನು ವಾಣಿಜ್ಯ ಮತ್ತು ಕೈಗಾರಿಕಾ ಸಚಿವ ಸುರೇಶ್‌ ಪ್ರಭು ಅವರಿಗೆ ಹೆಚ್ಚುವರಿಯಾಗಿ ವಹಿಸಲಾಗಿದೆ.

‘ಪ್ರಧಾನಿಯವರ ಸಲಹೆ ಮೇರೆಗೆ ರಾಷ್ಟ್ರಪತಿ ರಾಮನಾಥ ಕೋವಿಂದ್ ಅವರು ಸಂಪುಟ ಸಚಿವ ಸುರೇಶ್ ಪ್ರಭು ಅವರಿಗೆ ನಾಗರಿಕ ವಿಮಾನಯಾನ ಖಾತೆಯ ಹೆಚ್ಚುವರಿ ಹೊಣೆ ವಹಿಸಿದ್ದಾರೆ’ ಎಂದು ರಾಷ್ಟ್ರಪತಿಗಳ ಟ್ವಿಟರ್‌ ಖಾತೆಯಲ್ಲಿ ಪ್ರಕಟಿಸಲಾಗಿದೆ.

ಕೇಂದ್ರ ಬಜೆಟ್‌ನಲ್ಲಿ ಆಂಧ್ರಪ್ರದೇಶವನ್ನು ಕಡೆಗಣಿಸಲಾಗಿದೆ ಎಂದು ಆರೋಪಿಸಿ ಹಾಗೂ ರಾಜ್ಯಕ್ಕೆ ವಿಶೇಷ ಸ್ಥಾನಮಾನ ನೀಡುವಂತೆ ಆಗ್ರಹಿಸಿ ಅಶೋಕ್ ಗಜಪತಿ ರಾಜು ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ಮತ್ತೊಬ್ಬ ಟಿಡಿಪಿ ಸಂಸದ ವೈ.ಎಸ್. ಚೌಧರಿ ಅವರು ವಿಜ್ಞಾನ ಮತ್ತು ತಂತ್ರಜ್ಞಾನ ಖಾತೆಯ ರಾಜ್ಯ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry