ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರಾಣಿ ಪ್ರಪಂಚ: ಎಷ್ಟು ಪರಿಚಿತ?

Last Updated 10 ಮಾರ್ಚ್ 2018, 19:30 IST
ಅಕ್ಷರ ಗಾತ್ರ

1. ಚಿತ್ರ-1ರಲ್ಲಿರುವ ಪ್ರಾಣಿಯನ್ನು ಗಮನಿಸಿದಿರಾ? ನೆಲವಾಸಿ ಪ್ರಾಣಿಗಳಲ್ಲೆಲ್ಲ ‘ಅತ್ಯಂತ ದೊಡ್ಡ ಧ್ವನಿ’ಯ ವಿಶ್ವ ದಾಖಲೆಯನ್ನು ಹೊಂದಿರುವ ಈ ಪ್ರಾಣಿ ಯಾವುದು?

ಅ. ಪ್ರೊಬೋಸಿಸ್ ಮಂಗ
ಬ. ಮ್ಯಾಂಡ್ರಿಲ್
ಕ. ಜೇಡ ಕೋತಿ
ಡ. ಹೌಲರ್ ಮಂಗ

2. ಸಸ್ತನಿ ವರ್ಗಕ್ಕೆ ಸೇರಿರುವ, ಭಾರೀ ಮೀಸೆ ಹೊತ್ತು, ಅದರಿಂದಾಗಿಯೇ ‘ಚಕ್ರವರ್ತಿ’ ಎಂಬ ಗುಣ ವಿಶೇಷಣವನ್ನೂ ಪಡೆದಿರುವ ‘ಎಂಪರರ್ ಟಮರಿನ್’ ಚಿತ್ರ-2ರಲ್ಲಿದೆ. ಈ ಪ್ರಾಣಿ ಸಸ್ತನಿ ವರ್ಗದ ಯಾವ ಗುಂಪಿಗೆ ಸೇರಿದೆ ಗೊತ್ತೇ?

ಅ. ಗೊರಸಿನ ಪ್ರಾಣಿ
ಬ. ಸಂಚಿ ಸಸ್ತನಿ
ಕ. ಪ್ರೈಮೇಟ್
ಡ. ಮಾನೋಟ್ರೀಮ್

3. ಏಷ್ಯಾ ಖಂಡಕ್ಕಷ್ಟೇ ಸೀಮಿತವಾದ ವಾಸ್ತವ್ಯ ಪಡೆದಿರುವ ಪ್ರಸಿದ್ಧ ವಾನರ ‘ಗಿಬ್ಬನ್’ ಜೋಡಿಯೊಂದು ಚಿತ್ರ-3ರಲ್ಲಿದೆ.

ಅ. ಏಷ್ಯಾಕ್ಕಷ್ಟೇ ಸೀಮಿತವಾದ ನೆಲೆ ಹೊಂದಿರುವ ಮತ್ತೊಂದು ವಾನರ ಯಾವುದು?
ಬ. ಅತ್ಯಂತ ದೈತ್ಯ ಶರೀರದ ವಾನರ ಯಾವುದು?
ಕ. ರೂಪ, ಗಾತ್ರ, ಆಕಾರಗಳಲ್ಲಿ ಒಂದನ್ನೊಂದು ಸಂಪೂರ್ಣ ಹೋಲುವ ವಾನರ ವಿಧಗಳು ಯಾವುವು?

4. ಉಗ್ರ ವಿಷಕರ ಮೀನು ‘ಪಫರ್’ ಚಿತ್ರ-4ರಲ್ಲಿದೆ. ಈ ಕೆಳಗಿನ ಪಟ್ಟಿಯಲ್ಲಿ ವಿಷಕರವಲ್ಲದ ಪ್ರಾಣಿ ಯಾವುದು?

ಅ. ಹುಲಿ ಹಾವು
ಬ. ಕೊಮೊಡೊ ಡ್ರಾಗನ್
ಕ. ಅನಕೊಂಡಾ
ಡ. ಸಿಂಹ ಮೀನು
ಇ. ಪ್ಲಾಟಿಪಸ್

5. ಸಂದರ್ಭಕ್ಕೆ ತಕ್ಕಂತೆ ಶರೀರದ ಬಣ್ಣವನ್ನು ಬದಲಿಸಿಕೊಳ್ಳುವ ನಿಷ್ಣಾತ, ವಿಖ್ಯಾತ ಪ್ರಾಣಿ ‘ಗೋಸುಂಬೆ’ ಚಿತ್ರ-5ರಲ್ಲಿದೆ. ಗೋಸುಂಬೆಯಂತೆಯೇ ಬಣ್ಣ ಬದಲಾವಣೆಯ ಸಾಮರ್ಥ್ಯವನ್ನು ಹೊಂದಿರುವ ಪ್ರಾಣಿಗಳನ್ನು ಈ ಪಟ್ಟಿಯಲ್ಲಿ ಪತ್ತೆ ಮಾಡಬಲ್ಲಿರಾ?

ಅ. ಅಕ್ಟೋಪಸ್
ಬ. ಗೊರವಂಕ
ಕ. ಕಟ್ಲ್ ಮೀನು
ಡ. ಕಡಲ ಕುದುರೆ
ಇ. ಘವಿಯಲ್
ಈ. ಮನೆ ಹಲ್ಲಿ

6. ಅಸಾಧಾರಣವಾದ, ಬದುಕಲು ಸಾಧ್ಯವೇ ಆಗದ ಪರಿಸರದಲ್ಲಿ ನೆಮ್ಮದಿಯ ಬಾಳುವೆ ನಡೆಸುವ ಅತ್ಯಂತ ವಿಸ್ಮಯಕರ ಜೀವಿ ‘ದೈತ್ಯ ಕೊಳವೆ ಹುಳು’ ಗುಂಪೊಂದು ಚಿತ್ರ-6ರಲ್ಲಿದೆ. ಅತಿರೇಕದ ಜೀವಿಗಳ (ಎಕ್ಸ್ಟ್ರೀಮೊಫೈಲ್ಸ್) ಗುಂಪಿನ ಈ ಜೀವಿಯ ಬದುಕಿನ ನೆಲೆ ಯಾವುದು ಗೊತ್ತೇ?

ಅ. ಕಾರ್ಗತ್ತಲ ಗುಹಾಲೋಕ
ಬ. ಜ್ವಾಲಾಮುಖಿಗಳ ಅಂತರಾಳ
ಕ. ಕಡಲ ತಳದ ಕುದಿ ಜಲದ ಕಂಡಿ
ಡ. ಆಳ ಶಿಲಾಸ್ತರಗಳ ಟೊಳ್ಳು-ಬಿರುಕು

7. ಸಿಂಹಗಳಲ್ಲಿ ಪ್ರಸ್ತುತ ಎರಡೇ ಎರಡು ಬಗೆಗಳು ಅಸ್ತಿತ್ವದಲ್ಲಿವೆ: ‘ಆಫ್ರಿಕನ್ ಸಿಂಹ ಮತ್ತು ಏಷ್ಯಾಟಿಕ್ ಸಿಂಹ’ - ಹೌದಲ್ಲ? ಏಷ್ಯಾಟಿಕ್ ಸಿಂಹಗಳಂತೂ (ಚಿತ್ರ-7) ಏಷ್ಯಾ ಖಂಡದ ಒಂದೇ ಒಂದು ರಾಷ್ಟ್ರದಲ್ಲಿ, ಅದೂ ತುಂಬ ಸೀಮಿತ ಸಂಖ್ಯೆಯಲ್ಲಿ ಕಾಣ ಸಿಗುತ್ತವೆ. ಆ ರಾಷ್ಟ್ರ ಯಾವುದು?

ಅ. ಚೀನಾ
ಬ. ಥಾಯ್ಲೆಂಡ್
ಕ. ಮ್ಯಾನ್ಮಾರ್ (ಬರ್ಮಾ)
ಡ. ಭಾರತ
ಇ. ಶ್ರೀಲಂಕಾ


 

‌8. ಚಿತ್ರ-8ರಲ್ಲಿರುವ ಹಕ್ಕಿಯನ್ನೂ, ಅದರ ಕಲಾತ್ಮಕ ವಾಸ್ತು ನಿರ್ಮಿತಿಯನ್ನೂ ಗಮನಿಸಿ:

ಅ. ಈ ಹಕ್ಕಿ ಯಾವುದು?
ಬ. ಇಂಥ ನಿರ್ಮಿತಿಗಳ ಉದ್ದೇಶ ಏನು?

9. ದೊಡ್ಡ ಗಾತ್ರದ, ರೋಮಭರಿತ ಶರೀರದ, ಭಯಂಕರ ರೂಪದ, ವಿಷಕರವೂ ಆದ ಜೇಡ ಪ್ರಭೇದವೊಂದು ಚಿತ್ರ-9ರಲ್ಲಿದೆ. ಈ ಜೇಡದ ಹೆಸರೇನು ಗೊತ್ತೇ?

ಅ. ಬೋಲಾಸ್ ಜೇಡ
ಬ. ಟರಾಂಟ್ಯುಲಾ
ಕ. ಕಪ್ಪು ವಿಧವೆ
ಡ. ತೋಳ ಜೇಡ
ಇ. ಆಲಿಕೆ ಬಲೆ ಜೇಡ

10. ‘ಅನ್ಯ ಲೋಕದ ಜೀವಿ’ ಎಂಬಂಥ ರೂಪದ ವಿಸ್ಮಯಕರ ಪ್ರಾಣಿಯೊಂದು ಚಿತ್ರ-10ರಲ್ಲಿದೆ. ಈ ಪ್ರಾಣಿ ಯಾವುದೆಂದು ಗುರುತಿಸಬಲ್ಲಿರಾ?

ಅ. ಸರ್ಪದ ಮರಿ
ಬ. ಪತಂಗದ ಮರಿಹುಳು
ಕ. ಕಪ್ಪೆಯ ಗೊದಮೊಟ್ಟೆ
ಡ. ದುಂಬಿಯ ಲಾರ್ವಾ

11. ಜಗದಾದ್ಯಂತ ಅತ್ಯಂತ ಜನಪ್ರಿಯವಾಗಿರುವ ಸಾಕುಪ್ರಾಣಿ ‘ನಾಯಿ’ ಚಿತ್ರ-11ರಲ್ಲಿದೆ. ಈ ಕೆಳಗೆ ಹೆಸರಿಸಿರುವ ಪ್ರಾಣಿಗಳ ಪಟ್ಟಿಯಲ್ಲಿ ಯಾವುದು ಜೈವಿಕವಾಗಿ ಶ್ವಾನಗಳ ಅತ್ಯಂತ ಹತ್ತಿರದ ಸಂಬಂಧಿ? ಯಾವುದು ಶ್ವಾನಗಳ ಸಂಬಂಧಿ ಅಲ್ಲ?

ಅ. ನರಿ
ಬ. ಕಿರುಬ
ಕ. ಕರಡಿ
ಡ. ಡಿಂಗೋ
ಇ. ತೋಳ

12. ಪ್ರತಿ ವರ್ಷ ಕೋಟ್ಯಂತರ ಸಂಖ್ಯೆಯಲ್ಲಿ ಹಕ್ಕಿಗಳು ಕಳ್ಳ ಬೇಟೆಗಾರರು ಹಾಸುವ ಅಗೋಚರ ಬಲೆಗಳಿಗೆ ಸಿಲುಕಿ ಬಲಿಯಾಗುತ್ತಿವೆ (ಚಿತ್ರ-12). ಹೀಗೆ ವಿನಾಶಗೊಳ್ಳುತ್ತಿರುವ ಹಕ್ಕಿಗಳು ಪ್ರಧಾನವಾಗಿ ಈ ಕೆಳಗಿನ ಯಾವ ಗುಂಪಿಗೆ ಸೇರಿವೆ?

ಅ. ಹಾಡುಗಾರ ಹಕ್ಕಿಗಳು
ಬ. ವಲಸೆಗಾರ ಹಕ್ಕಿಗಳು
ಕ. ಪುಟ್ಟ ಗಾತ್ರದ ಹಕ್ಕಿಗಳು
ಡ. ಗೂಡು ಕಟ್ಟುವ ಹಕ್ಕಿಗಳು

13. ಚಿತ್ರ-13ರಲ್ಲಿರುವ ವಿಚಿತ್ರ ರೂಪದ ಸಾಗರ ಪ್ರಾಣಿಯನ್ನು ಗಮನಿಸಿ. ಯಾವುದು ಈ ಪ್ರಾಣಿ?

ಅ. ಜೆಲ್ಲಿ ಮೀನು
ಬ. ನಕ್ಷತ್ರ ಮೀನು
ಕ. ಅಷ್ಟ ಪದಿ
ಡ. ಕಡಲ ಆನಿಮೋನಿ
ಇ. ಸ್ಕ್ವಿಡ್

14. ಹೊಂದಿಸಿ ಕೊಡಿ:

1. ರೋಡ್ ರನ್ನರ್ →ಅ. ಮೀನು
2. ಸಾರ್ಡೈನ್ →ಬ. ಬೆಕ್ಕು
3. ಸೈಡ್ ವೈಂಡರ್ →ಕ. ಪಾತರಗಿತ್ತಿ
4. ಮೋನಾರ್ಕ್ →ಡ. ಹಕ್ಕಿ
5. ಕಪೂಚಿನ್ →ಇ. ಸರ್ಪ
6. ಮಾರ್ಗೇ →ಈ. ಮಂಗ
******
ಉತ್ತರಗಳು:
1. ಡ - ಹೌಲರ್ ಮಂಗ
2. ಕ - ಪ್ರೈಮೇಟ್
3. ಅ - ಒರಾಂಗುಟಾನ್; ಬ - ಗೊರಿಲ್ಲ; ಕ - ಚಿಂಪಾಂಜಿ ಮತ್ತು ಬೊನಬೊ
4. ಕ - ಅನಕೊಂಡಾ
5. ಅ, ಕ ಮತ್ತು ಡ
6. ಕ - ಕಡಲ ತಳದ ಕುದಿ ಜಲದ ಕಂಡಿ
7. ಡ - ಭಾರತ
8. ಅ - ಕುಂಜ ಪಕ್ಷಿ; ಬ - ಪ್ರಣಯಕ್ಕೆ ಹೆಣ್ಣು ಹಕ್ಕಿಯ ಓಲೈಕೆ;
9. ಬ- ಟರಾಂಟ್ಯುಲಾ
10. ಬ - ಪತಂಗದ ಮರಿ ಹುಳು
11. ಅತ್ಯಂತ ಹತ್ತಿರದ ಸಂಬಂಧಿ - ತೋಳ; ಸಂಬಂಧಿ ಅಲ್ಲದ್ದು - ಕಿರುಬ
12. ಬ - ವಲಸೆಗಾರ ಹಕ್ಕಿಗಳು
13. ಅ - ಜೆಲ್ಲಿ ಮೀನು
14. 1 - ಡ; 2 - ಅ; 3 - ಇ; 4 - ಕ; 5 - ಈ; 6 - ಬ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT