ನಾನು ಪ್ರಧಾನಿಯಾಗಿದ್ದರೆ ನೋಟು ರದ್ದತಿ ಪ್ರಸ್ತಾಪವನ್ನು ಕಸದ ಬುಟ್ಟಿಗೆ ಎಸೆಯುತ್ತಿದ್ದೆ: ರಾಹುಲ್ ಗಾಂಧಿ

7

ನಾನು ಪ್ರಧಾನಿಯಾಗಿದ್ದರೆ ನೋಟು ರದ್ದತಿ ಪ್ರಸ್ತಾಪವನ್ನು ಕಸದ ಬುಟ್ಟಿಗೆ ಎಸೆಯುತ್ತಿದ್ದೆ: ರಾಹುಲ್ ಗಾಂಧಿ

Published:
Updated:
ನಾನು ಪ್ರಧಾನಿಯಾಗಿದ್ದರೆ ನೋಟು ರದ್ದತಿ ಪ್ರಸ್ತಾಪವನ್ನು ಕಸದ ಬುಟ್ಟಿಗೆ ಎಸೆಯುತ್ತಿದ್ದೆ: ರಾಹುಲ್ ಗಾಂಧಿ

ಸಿಂಗಾಪೂರ್ : ಗರಿಷ್ಠ ಮುಖಬೆಲೆಯ ನೋಟುಗಳನ್ನು ರದ್ದು ಮಾಡಿದ್ದು ಒಳ್ಳೆಯ ನಿರ್ಧಾರ ಆಗಿರಲಿಲ್ಲ. ಒಂದು ವೇಳೆ ನಾನು ಪ್ರಧಾನಿಯಾಗಿದ್ದರೆ ಆ ಪ್ರಸ್ತಾಪವನ್ನು ಕಸದ ಬುಟ್ಟಿಗೆ ಎಸೆಯುತ್ತಿದ್ದೆ ಎಂದು ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಹೇಳಿದ್ದಾರೆ.

ಆಗ್ನೇಯ ಏಷ್ಯಾ ರಾಷ್ಟ್ರಗಳಿಗೆ 5 ದಿನಗಳ ಪ್ರವಾಸ ಕೈಗೊಂಡಿರುವ ರಾಹುಲ್ ಶನಿವಾರ ಮಲೇಷ್ಯಾ ತಲುಪಿದ್ದು,  ಕೌಲಾಲಾಂಪುರ್‍‍ನಲ್ಲಿ ನಡೆದ ಸಂವಾದವೊಂದರಲ್ಲಿ ಈ ಮಾತು ಹೇಳಿದ್ದಾರೆ.

ನೋಟುರದ್ದತಿ ನಿರ್ಧಾರವನ್ನು ನೀವು ಯಾವ ರೀತಿ ಅನುಷ್ಠಾನಕ್ಕೆ ತರುತ್ತಿದ್ದಿರಿ? ಎಂಬ ಪ್ರಶ್ನೆಗೆ ಉತ್ತರಿಸಿದ ರಾಹುಲ್, ನಾನು ಪ್ರಧಾನಿಯಾಗಿದ್ದರೆ ಮತ್ತು  ನೋಟುರದ್ದತಿ ಪ್ರಸ್ತಾಪವನ್ನು ನನ್ನ ಮುಂದಿರಿಸಿದ್ದರೆ ನಾನು ಅದನ್ನು ಕಸದ ಬುಟ್ಟಿಗೆ ಎಸೆಯುತ್ತಿದ್ದೆ. ನೋಟುರದ್ದತಿ ನಿರ್ಧಾರವನ್ನು ಬಾಗಿಲಿನಿಂದಾಚೆ ದೂರ ಎಸೆಯುವ ನಿರ್ಧಾರವನ್ನು ನಾನು ತೆಗೆದುಕೊಳ್ಳುತ್ತಿದ್ದೆ ಎಂದಿದ್ದಾರೆ.

ರಾಹುಲ್ ಅವರ ಸಂವಾದದ ತುಣುಕನ್ನು ಕಾಂಗ್ರೆಸ್ ತಮ್ಮ ಟ್ವಿಟರ್ ಖಾತೆಯಲ್ಲಿ ಶೇರ್ ಮಾಡಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry