ಲಕ್ಷ್ಮೇಶ್ವರದ ಪ್ರೇಮಕ್ಕ ಬಿಂಕದಕಟ್ಟಿ ಅವರೇ ನನಗೆ ಸ್ಫೂರ್ತಿ

7

ಲಕ್ಷ್ಮೇಶ್ವರದ ಪ್ರೇಮಕ್ಕ ಬಿಂಕದಕಟ್ಟಿ ಅವರೇ ನನಗೆ ಸ್ಫೂರ್ತಿ

Published:
Updated:
ಲಕ್ಷ್ಮೇಶ್ವರದ ಪ್ರೇಮಕ್ಕ ಬಿಂಕದಕಟ್ಟಿ ಅವರೇ ನನಗೆ ಸ್ಫೂರ್ತಿ

'ಅಕ್ಕ’ ಎಂಬ ಮಧುರ ಪದವು ಕನ್ನಡ ಸಾಹಿತ್ಯದಲ್ಲೊಂದು ಅದ್ಭುತ, ಜೀವಂತ ಅಮರತ್ವದ ಮತ್ತು ಹೋರಾಟದ ಪ್ರತೀಕಕ್ಕೊಂದು ಉದಾಹರಣೆ

     ಕದಳಿ ಎಂಬುದು ತನು! ಕದಳಿ ಎಂಬುದು ಮನ

     ಕದಳಿಯೆಂಬುದು ವಿಷಯಂಗಳು!

     ಕದಳಿಯೆಂಬುದು ಭವ ಘೋರಾರಣ್ಯ

     ಕದಳಿಯೆಂಬುದ ಗೆದ್ದು ತವೆ ಬದುಕ ಬಂದು

     ಕದಳಿಯ ಬನದಲ್ಲಿ ಭವ ಹರನ ಕಂಡೆನು

     ಭವಗೆಟ್ಟು ಬಂದ ಮಗಳೆಂದು

     ಕರುಣದಿಂ ತೆಗೆದು ಬಿಗಿಯಪ್ಪಿದರೆ

     ಚೆನ್ನ ಮಲ್ಲಿಕಾರ್ಜುನನ ಹೃದಯ ಕಮಲದಲಿ ಅಡಗಿದೆನು."

ಬದುಕಿನ ಎಲ್ಲ ರೀತಿಯ ಆಕಾರ ವಿಕಾರಗಳ ಸಾಕ್ಷಾತ್ ರೂಪವೇ ಕದಳಿ. ಆದರೆ ಇವೆಲ್ಲವಕ್ಕೂ ತನ್ನದೇ ರೀತಿಯ ಉತ್ತರ ನೀಡಿದವಳು ಅಕ್ಕ. ಅಂದರೆ ಕದಳಿಯೆಂಬ ಘೋರ ಕಾನನವಲ್ಲೂ ಶಂಕರನ ಸನಿಹಕ್ಕೆ ಬಯಸಿದವಳವಳು. ಅಂದರೆ ಅಕ್ಕ ಬದುಕೇ ಹೋರಾಟ. ಅವಳು ಅಂತಿಂಥ ಗಂಡನನ್ನು ಬಯಸಲಿಲ್ಲ ಸಾಕ್ಷಾತ್ ಶಿವನನ್ನೇ ಬಯಸಿತ್ತಾಳೆ. ಅಂದರೆ ಚೆನ್ನನೇ ಅವಳಿಗೆ "ಚೆನ್ನ" ಅವನೆನ್ನೇ ಬಯಸುತ್ತಾಳೆ.  ಒಪ್ಪುತ್ತಾಳೆ. ಶರಣಾಗುತ್ತಾಳೆ.

ಅಂತಹ  ಅಕ್ಕನನ್  ಜೀವಂತ ತಂದಿರಿಸಿದ ಕೀರ್ತಿ ಗದಗ ಜಿಲ್ಲೆ ಲಕ್ಷ್ಮೇಶ್ವರದ ಪ್ರೇಮಕ್ಕ ಬಿಂಕದಕಟ್ಟಿಯವರಿಗೆ ಸಲ್ಲುತ್ತದೆ.ಒಬ್ಬ ಸ್ತ್ರೀಯಾಗಿ  ಏನೆಲ್ಲಾ ಮಾಡಬಹುದು ಎಂಬುದನ್ನು ತೋರಿಸಿಕೊಟ್ಟವರು. ಸಾಹಿತ್ಯ ಕೇವಲ ಕಲವರಿಗೆ ಮಾತ್ರ ಸೀಮೀತವಲ್ಲ;ಮನೆಯಲ್ಲಿರುವ ಮಹಿಳೆಯರೂ ಹೇಗೆ ಸಾಹಿತ್ಯ ಕೃಷಿ ಮಾಡಬಹುದು, ಅಂತಹವರಿಗೂ ಸ್ಪೂರ್ತಿ ತುಂಬಿ ಮಹಿಳೆಯರು ಅತ್ಯಂತ ಚಟುವಟಿಕೆಯಿಂದ ಸಾಹಿತ್ಯ ಕೆಲಸದಲ್ಲಿ ಭಾಗವಹಿಸುವದನ್ನು ನೋಡುವದೇ ಹಬ್ಬ ಏನಿಸುತ್ತದೆ. ಒಂದು ಕೆಲಸ ಮೈಲುಗಲ್ಲಾಗಬೇಕಾದರೆ ಅಲ್ಲೊಂದು ಹೋರಾಟದ ಬದುಕೇ ಇರುತ್ತದೆ. ಒಬ್ಬ ಸ್ತ್ರೀ ತಾನು ಏನೆಲ್ಲಾ ಮಾಡಬಹುದು. ಅದೂ ಈ ಇಳಿವಯಸ್ಸಿನಲ್ಲಿ 70ರ ಹರೆಯದಲ್ಲಿ 20ರ ಹದಿಯದವರಂತೆ ಅವರು ಮಾಡಿದ ಕೆಲಸವೇ ತಿಳಿಸುತ್ತವೆ. ಅಲ್ಲದೇ ಕನ್ನಡ ಸಾಹಿತ್ಯದಲ್ಲಿ ಸ್ತ್ರೀಗೆ ವಿಶೇಷ ಸ್ಥಾನಮಾನಕ್ಕೆ ಕಳಶಪ್ರಾಯಳಾದ ಅಕ್ಕಮಹಾದೇವಿಯ ಮೂರ್ತಿ ಅದಕ್ಕೆ ತಕ್ಕನಾದ ಗುಡಿ,ಸ್ತ್ರೀಯರಿಂದಲೇ ಪಲ್ಲಕ್ಕಿ ಉತ್ಸವ ,

ನೆಲದ ಮರೆಯ ನಿಧಾನದಂತೆ

ಫಲದ ಮರೆಯ ರುಚಿಯಂತೆ

ಶಿಲೆಯ ಮರೆಯ ಹೇಮದಂತೆ

ತಿಲದ ಮರೆಯ ತೈಲದಂತೆ

ಮರದ ಮರೆಯ ತೇಜದಂತೆ

ಭಾವದ ಮರೆಂತಾ ಬ್ರಹ್ಮವಾಗಿಪ್ಪ

ಚೆನ್ನಮಲ್ಲಿಕಾರ್ಜುನನ ನಿಲವನಾರೂ ಅರಿಯಬಾರದು.

ಇದೊಂದು ಅಕ್ಕನ ಸೌಂದರ್‍ಯ ಮಿಮಾಂಸೆ ಪ್ರತೀಕ. ಅವಳು ಸದಾ ಹೊಸದನ್ನು ಅರಿಸುವ ಚಲನಶೀಲತೆಗೆ ಗುರಿ ಇಡುತ್ತಾಳೆ. ಅಂದರೆ ಪ್ರತಿ ವ್ಯಕ್ತಿ ಏನೆಲ್ಲಾ ಮಾಡಿದೆ ಎಂದು ಬೀಗುವಾಗ ಅವನ ವ್ಯಕ್ತಿತ್ವದ ಮರು ಪರಿಶೀಲನೆ ಅಗತ್ಯ ಅದಕ್ಕೆ ಮುಖ್ಯವಾಗಿ ಜ್ಞಾನಶೋಧ ಅವಶ್ಯ ಅಂತಹ ಕೆಲಸವನ್ನು ತಾನು ಮಾಡುವದರೊಂದಿಗೆ ಎಲ್ಲರೊಡನೆ ಮಾಡುತ್ತಿರುವದು ನಿಜಕ್ಕೂ ಶ್ಲಾಘನೀಯ ಅಂದರೆ ಇವರು ಕದಳಿ ವೇದಿಕೆ ಅಧ್ಯಕ್ಷರೂ, ರಾಜರಾಜೇಶ್ವರಿ ಸಾಹಿತ್ಯ ಮತ್ತು ಸಂಸ್ಕೃತಿ ವೇದಿಕೆ, ಹಾಗೂ ಸದಸ್ಯರು ಶ್ರೀ ಸಿದ್ಧೇಶ್ವರರಾಗಿ, ಅಲ್ಲದೇ ಎರಡು ಸಲ ಶಿರಹಟ್ಟಿ ತಾಲೂಕು ಕನ್ನಡ

ಸಾಹಿತ್ಯ ಪರಿಷತ್ ಅಧ್ಯಕ್ಷರಾಗಿಯೂ ಉತ್ತಮ ಕೆಲಸ ನಿರ್ವಹಿಸಿದ್ದಾರೆ.ಇಂತಹವರು ನನಗೆ ಮಾತ್ರವಲ್ಲ,ಬಹಳಷ್ಟು ಸ್ತ್ರೀಯರಿಗೆ ಸ್ಪೂರ್ತಿಯಾಗಿದ್ದಾರೆ.

-ಡಾ.ಭಾಗ್ಯಜ್ಯೋತಿ ಕೋಟಿಮಠ

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry