ವಾಹನ ಡಿಕ್ಕಿ: ಚಿರತೆ, ಮರಿ ಸಾವು

7

ವಾಹನ ಡಿಕ್ಕಿ: ಚಿರತೆ, ಮರಿ ಸಾವು

Published:
Updated:
ವಾಹನ ಡಿಕ್ಕಿ: ಚಿರತೆ, ಮರಿ ಸಾವು

ಕುಣಿಗಲ್: ತಾಲ್ಲೂಕಿನ ಚಿಕ್ಕಮಳಲವಾಡಿ ಗ್ರಾಮದ ಬಳಿ ಶುಕ್ರವಾರ ರಾತ್ರಿ ಅಪರಿಚಿತ ವಾಹನ ಡಿಕ್ಕಿ ಹೊಡೆದು ಚಿರತೆ ಹಾಗೂ ಅದರ ಮರಿ ಮೃತಪಟ್ಟಿವೆ.

ತಾಯಿ ಚಿರತೆಗೆ 7 ವರ್ಷ ಹಾಗೂ ಮರಿಗೆ ನಾಲ್ಕು ತಿಂಗಳಾಗಿತ್ತು. ಅಪಘಾತ ನಡೆದ ತಕ್ಷಣವೇ ಮರಿ ಮೃತಪಟ್ಟರೆ, ತಾಯಿ  ಬೆಳಿಗ್ಗೆಯವರೆಗೂ ಉಸಿರಾಡುತ್ತಿತ್ತು ಎಂದು ಗ್ರಾಮಸ್ಥರು ಪೊಲೀಸರಿಗೆ ಮಾಹಿತಿ ನೀಡಿದರು.

ಅರಣ್ಯ ಇಲಾಖೆ ಅಧಿಕಾರಿಗಳು ಹಾಗೂ ಪಶುವೈದ್ಯರು ಬಂದು ಚಿಕಿತ್ಸೆ ನೀಡಿದರು. ಆದರೆ ತೀವ್ರಗಾಯಗೊಂಡಿದ್ದ ಅದು ಸ್ವಲ್ಪ ಸಮಯದಲ್ಲಿಯೇ ಮೃತಪಟ್ಟಿತು. ಅರಣ್ಯ ಇಲಾಖೆ ಅಧಿಕಾರಿ ರವಿ, ಜಿಲ್ಲಾ ವನ್ಯ ಜೀವಿ ಪರಿಪಾಲಕ ಟಿವಿಎನ್ ಮೂರ್ತಿ ಸಮ್ಮುಖದಲ್ಲಿ ವೈದ್ಯರಾದ ವಿನಯ್, ಲೋಕೇಶ್ ಶವಪರೀಕ್ಷೆ ನಡೆಸಿದರು. ನಂತರ ಅಂತ್ಯಕ್ರಿಯೆ

ನೆರವೇರಿಸಲಾಯಿತು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry