6

‘ಸುಪ್ರೀಂ’ಗೆ ಕೇವಿಯಟ್‌ ಸಲ್ಲಿಸಿದ ಕಾರ್ತಿ ಚಿದಂಬರಂ

Published:
Updated:
‘ಸುಪ್ರೀಂ’ಗೆ ಕೇವಿಯಟ್‌ ಸಲ್ಲಿಸಿದ ಕಾರ್ತಿ ಚಿದಂಬರಂ

ನವದೆಹಲಿ: ಐಎನ್‌ಎಕ್ಸ್ ಮೀಡಿಯಾ ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಸಿಬಿಐ ಬಂಧನದಲ್ಲಿರುವ ಕಾರ್ತಿ ಚಿದಂಬರಂ ಸುಪ್ರೀಂ ಕೋರ್ಟ್‌ನಲ್ಲಿ ಶನಿವಾರ ಕೇವಿಯಟ್ ಅರ್ಜಿ ಸಲ್ಲಿಸಿದ್ದಾರೆ.

ಈ ಪ್ರಕರಣದಲ್ಲಿ ಮಾರ್ಚ್ 20ರವರೆಗೆ ಕಾರ್ತಿ ಅವರ ಬಂಧನಕ್ಕೆ ದೆಹಲಿ ಹೈಕೋರ್ಟ್ ತಡೆ ನೀಡಿದ್ದರ ವಿರುದ್ಧ ಜಾರಿ ನಿರ್ದೇಶನಾಲಯವು ಸುಪ್ರೀಂ ಕೋರ್ಟ್‌ನಲ್ಲಿ ಮೇಲ್ಮನವಿ ಸಲ್ಲಿಸುವ ಸಾಧ್ಯತೆ ಇದೆ. ತಮ್ಮ ವಿರುದ್ಧ ಜಾರಿ ನಿರ್ದೇಶನಾಲಯವು ತೆಗೆದುಕೊಳ್ಳಬಹುದಾದ ಯಾವುದೇ ಕ್ರಮದ ವಿರುದ್ಧ ರಕ್ಷಣೆ ಪಡೆಯುವ ಸಲುವಾಗಿ ಕಾರ್ತಿ ಕೇವಿಯಟ್ ಸಲ್ಲಿಸಿದ್ದಾರೆ.

ಕಾರ್ತಿ ಸದ್ಯ ಸಿಬಿಐ ಬಂಧನದಲ್ಲಿದ್ದು, ಅವರ ಕಸ್ಟಡಿಯ ಅವಧಿ ಮಾರ್ಚ್ 12ಕ್ಕೆ ಮುಗಿಯಲಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry