ಮತ್ತಷ್ಟು ರಫೇಲ್‌ ಮಾರಾಟಕ್ಕೆ ಫ್ರಾನ್ಸ್‌ ಆಸಕ್ತಿ: ಹೊರಬೀಳದ ಭಾರತದ ನಿರ್ಧಾರ

7

ಮತ್ತಷ್ಟು ರಫೇಲ್‌ ಮಾರಾಟಕ್ಕೆ ಫ್ರಾನ್ಸ್‌ ಆಸಕ್ತಿ: ಹೊರಬೀಳದ ಭಾರತದ ನಿರ್ಧಾರ

Published:
Updated:

ನವದೆಹಲಿ: ಭಾರತಕ್ಕೆ ಇನ್ನೂ 36 ರಫೇಲ್‌ ಯುದ್ಧ ವಿಮಾನ ಮಾರಾಟ ಮಾಡಲು ಫ್ರಾನ್ಸ್‌ ಆಸಕ್ತಿ ತೋರಿಸಿದೆ. ಆದರೆ, ಭಾರತ ಆ ಬಗ್ಗೆ ಇನ್ನೂ ಯಾವುದೇ ನಿರ್ಧಾರ ಕೈಗೊಂಡಿಲ್ಲ.

ಫ್ರಾನ್ಸ್‌ ಕಳೆದು ತಿಂಗಳು ಭಾರತದ ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್‌ ಅವರಿಗೆ ಇನ್ನೂ 36 ರಫೇಲ್‌ ಮಾರಾಟದ ಪ್ರಸ್ತಾವನೆ ಸಲ್ಲಿಸಿತ್ತು.

ಫ್ರಾನ್ಸ್ ಅಧ್ಯಕ್ಷ ಇಮ್ಯಾನ್ಯುವೆಲ್‌ ಮ್ಯಾಕ್ರೋನ್‌ ಭಾರತ ಭೇಟಿಯ ವೇಳೆ ಈ ಬಗ್ಗೆ ಒಪ್ಪಂದಕ್ಕೆ ಎದುರು ನೋಡುತ್ತಿರುವುದಾಗಿ ಹೇಳಿತ್ತು. ಆದರೆ, ಶನಿವಾರ ಭಾರತದಿಂದ ಯಾವ ಪ್ರತಿಕ್ರಿಯೆಯೂ ದೊರೆತಿಲ್ಲ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry