ಬಂದೂಕುಧಾರಿ, ಮಹಿಳೆಯರ ಶವ ಪತ್ತೆ

7

ಬಂದೂಕುಧಾರಿ, ಮಹಿಳೆಯರ ಶವ ಪತ್ತೆ

Published:
Updated:

ಲಾಸ್‌ ಏಂಜಲೀಸ್‌: ಕ್ಯಾಲಿಫೋರ್ನಿಯಾದ ಯೋಂಟ್‌ವಿಲ್ಲೆಯ ಮಾಜಿ ಸೈನಿಕರ ಆಶ್ರಯ ಕೇಂದ್ರದಲ್ಲಿ ಮೂವರು ಮಹಿಳೆಯರು ಮತ್ತು ಅವರನ್ನು ಒತ್ತೆಯಲ್ಲಿರಿಸಿಕೊಂಡಿದ್ದ ಬಂದೂಕುಧಾರಿಯ ಮೃತದೇಹಗಳು ಪತ್ತೆಯಾಗಿವೆ.

‘ಶಂಕಿತ ವ್ಯಕ್ತಿಯು ಮಹಿಳೆಯರನ್ನು ಎಂಟು ಗಂಟೆಗಳ ಕಾಲ ಒತ್ತೆಯಲ್ಲಿರಿಸಿದ್ದ. ಅವರ ಬಿಡುಗಡೆಗಾಗಿ ಪೊಲೀಸರು ನಡೆಸಿದ ಕಾರ್ಯಾಚರಣೆ ಬಳಿಕ ಮೃತ ದೇಹಗಳು ಪತ್ತೆಯಾಗಿವೆ. ಈ ಆಶ್ರಯಕೇಂದ್ರದಲ್ಲಿ ಸಾವಿರಕ್ಕಿಂತಲೂ ಹೆಚ್ಚು ಮಾಜಿ ಸೈನಿಕರಿದ್ದರು. ಮೃತಪಟ್ಟಿರುವ ಮೂವರು ಮಹಿಳೆಯರು ಆಶ್ರಯ ಕೇಂದ್ರದ ಸಿಬ್ಬಂದಿ ಎಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry