ಮುಂಬೈ ಟಿ–20 ಲೀಗ್‌

5

ಮುಂಬೈ ಟಿ–20 ಲೀಗ್‌

Published:
Updated:

ಮುಂಬೈ: ಚೊಚ್ಚಲ ಆವೃತ್ತಿಯ ಮುಂಬೈ ಟ್ವೆಂಟಿ–20 ಲೀಗ್‌ ಕ್ರಿಕೆಟ್‌ ಟೂರ್ನಿ ಭಾನುವಾರದಿಂದ ನಡೆಯಲಿದೆ.

ಯುವ ‍‍ಪ್ರತಿಭೆಗಳಿಗೆ ವೇದಿಕೆ ಕಲ್ಪಿಸುವ ಉದ್ದೇಶದಿಂದ ಲೀಗ್‌ ಆರಂಭಿಸಲಾಗಿದೆ. ಇದರಲ್ಲಿ ಒಟ್ಟು ಆರು ತಂಡಗಳು ಪ್ರಶಸ್ತಿಗಾಗಿ ಪೈಪೋಟಿ ನಡೆಸಲಿವೆ. ವಾಂಖೆಡೆ ಕ್ರೀಡಾಂಗಣದಲ್ಲಿ ಪಂದ್ಯಗಳು ಜರುಗಲಿವೆ.

ಭಾನುವಾರ ನಡೆಯುವ ಮೊದಲ ಪಂದ್ಯದಲ್ಲಿ ನಾರ್ತ್‌ ಮುಂಬೈ ಪ್ಯಾಂಥರ್ಸ್ ತಂಡ ಅಂಧೇರಿ ವಿರುದ್ಧ ಆಡಲಿದೆ. ದಿನದ ಇನ್ನೊಂದು ಹೋರಾಟದಲ್ಲಿ ಸೊಬೊ ಸೂಪರ್‌ಸೋನಿಕ್ಸ್‌ ಮತ್ತು ಮುಂಬೈ ನಾರ್ತ್‌ ಈಸ್ಟ್‌ ನೈಟ್ಸ್‌ ಮುಖಾಮುಖಿಯಾಗಲಿವೆ.

ರೋಹಿತ್‌ ಶರ್ಮಾ, ಅಜಿಂಕ್ಯ ರಹಾನೆ, ಧವಳ್‌ ಕುಲಕರ್ಣಿ ಸೇರಿದಂತೆ ಪ್ರಮುಖ ಆಟಗಾರರು ಲೀಗ್‌ಗೆ ಅಲಭ್ಯರಾಗಿದ್ದಾರೆ. ಇವರನ್ನು ವಿವಿಧ ಫ್ರಾಂಚೈಸ್‌ಗಳು ಹರಾಜಿನಲ್ಲಿ ಖರೀದಿಸಿದ್ದವು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry