ಒಪ್ಪಂದ ಮುಂದುವರಿಸದಿರಲು ಶರಪೋವಾ ತೀರ್ಮಾನ

ಬುಧವಾರ, ಮಾರ್ಚ್ 20, 2019
25 °C

ಒಪ್ಪಂದ ಮುಂದುವರಿಸದಿರಲು ಶರಪೋವಾ ತೀರ್ಮಾನ

Published:
Updated:
ಒಪ್ಪಂದ ಮುಂದುವರಿಸದಿರಲು ಶರಪೋವಾ ತೀರ್ಮಾನ

ಇಂಡಿಯಾನ ವೇಲ್ಸ್‌: ರಷ್ಯಾದ ಟೆನಿಸ್‌ ಆಟಗಾರ್ತಿ ಮರಿಯಾ ಶರಪೋವಾ, ಕೋಚ್‌ ಸ್ವೆನ್‌ ಗ್ರೊನ್‌ವೆಲ್ಡ್‌ ಜೊತೆಗಿನ ಒಪ್ಪಂದ ಮುಂದುವರಿಸದಿರಲು ತೀರ್ಮಾನಿಸಿದ್ದಾರೆ.

ಇಂಡಿಯಾನ ವೇಲ್ಸ್‌ ಟೂರ್ನಿಯಲ್ಲಿ ಆರಂಭಿಕ ಸುತ್ತಿನಲ್ಲೇ ಸೋತಿದ್ದರಿಂದ ಬೇಸರಗೊಂಡು ಈ ನಿರ್ಧಾರ ಕೈಗೊಂಡಿದ್ದಾರೆ.

ನೆದರ್ಲೆಂಡ್ಸ್‌ನ ಸ್ವೆನ್‌, ಹಿಂದಿನ ನಾಲ್ಕು ವರ್ಷಗಳಿಂದ ಶರಪೋವಾ ಅವರ ವೈಯಕ್ತಿಕ ಕೋಚ್‌ ಆಗಿದ್ದರು.

‘ನಾಲ್ಕು ವರ್ಷಗಳ ಹಿಂದೆ ಸ್ವೆನ್‌ ಅವರನ್ನು ಕೋಚ್ ಆಗಿ ನೇಮಿಸಿಕೊಂಡಿದ್ದೆ. ಅವರ ಮಾರ್ಗದರ್ಶನದಲ್ಲಿ ಅನೇಕ ಕೌಶಲಗಳನ್ನು ಕಲಿತು ಅವುಗಳನ್ನು ಮೈಗೂಡಿಸಿಕೊಂಡಿದ್ದೇನೆ.

ಜೊತೆಗೆ ಹಲವು ಪ್ರಶಸ್ತಿಗಳನ್ನು ಜಯಿಸಿದ್ದೇನೆ. ಸ್ವೆನ್‌ ಅವರೊಂದಿಗೆ ಕಳೆದ ಕ್ಷಣಗಳು ಸದಾ ನೆನಪಿನಲ್ಲಿ ಉಳಿಯುವಂತಹವು’ ಎಂದು ಶರಪೋವಾ ಹೇಳಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry