ಎರಡನೇ ಸುತ್ತಿಗೆ ಯೂಕಿ

7
ಇಂಡಿಯಾನ ವೇಲ್ಸ್‌ ಟೆನಿಸ್‌ ಟೂರ್ನಿ; ನಿಕೊಲಸ್‌ಗೆ ಆಘಾತ ನೀಡಿದ ಭಾರತದ ಆಟಗಾರ

ಎರಡನೇ ಸುತ್ತಿಗೆ ಯೂಕಿ

Published:
Updated:
ಎರಡನೇ ಸುತ್ತಿಗೆ ಯೂಕಿ

ಇಂಡಿಯಾನ ವೇಲ್ಸ್‌, ಅಮೆರಿಕ: ಅಮೋಘ ಆಟ ಆಡಿದ ಭಾರತದ ಯೂಕಿ ಭಾಂಬ್ರಿ, ಇಂಡಿಯಾನ ವೇಲ್ಸ್‌ ಟೆನಿಸ್‌ ಟೂರ್ನಿಯಲ್ಲಿ ಶುಭಾರಂಭ ಮಾಡಿದ್ದಾರೆ.

ಶನಿವಾರ ನಡೆದ ಪುರುಷರ ಸಿಂಗಲ್ಸ್‌ ವಿಭಾಗದ ಮೊದಲ ಸುತ್ತಿನ ಹೋರಾಟದಲ್ಲಿ ಯೂಕಿ 7–5, 6–3ರ ನೇರ ಸೆಟ್‌ಗಳಿಂದ ಫ್ರಾನ್ಸ್‌ನ ನಿಕೊಲಸ್‌ ಮಹುತ್‌ಗೆ ಆಘಾತ ನೀಡಿದರು. ವಿಶ್ವ ಕ್ರಮಾಂಕ ಪಟ್ಟಿಯಲ್ಲಿ 110ನೇ ಸ್ಥಾನ ಹೊಂದಿರುವ ಯೂಕಿ, ಅರ್ಹತಾ ಸುತ್ತಿನಲ್ಲಿ ಆಡಿದ ಎರಡೂ ಪಂದ್ಯಗಳಲ್ಲಿ ಗೆದ್ದು ಮುಖ್ಯ ಸುತ್ತು ಪ್ರವೇಶಿಸಿದ್ದರು.

ಮುಂದಿನ ಸುತ್ತಿನಲ್ಲಿ ಯೂಕಿ, ಫ್ರಾನ್ಸ್‌ನ ಲುಕಾಸ್‌  ಪಾವಿಲ್ ವಿರುದ್ಧ ಸೆಣಸಲಿದ್ದಾರೆ. ಪಾವಿಲ್ ವಿಶ್ವ ರ‍್ಯಾಂಕಿಂಗ್‌ನಲ್ಲಿ 12ನೇ ಸ್ಥಾನ ಹೊಂದಿದ್ದಾರೆ.

ಮುಗುರುಜಾಗೆ ಆಘಾತ: ಮಹಿಳೆಯರ ಸಿಂಗಲ್ಸ್‌ ವಿಭಾಗದ ಎರಡನೇ ಸುತ್ತಿನಲ್ಲಿ ಸ್ಪೇನ್‌ನ ಗಾರ್ಬೈನ್‌ ಮುಗುರುಜಾ ಆಘಾತ ಅನುಭವಿಸಿದರು. ಅಮೆರಿಕದ ಸಚಿಯ ವಿಕೆರಿ 2–6, 7–5, 6–1ರಲ್ಲಿ ವಿಶ್ವ ರ‍್ಯಾಂಕಿಂಗ್‌ನಲ್ಲಿ ಮೂರನೇ ಸ್ಥಾನದಲ್ಲಿರುವ ಮುಗುರುಜಾ ಸವಾಲು ಮೀರಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry