ಐಪಿಎಲ್‌: ಡೆಲ್ಲಿ ಡೇರ್‌ಡೆವಿಲ್ಸ್‌ನಲ್ಲಿ ಪಾಲು ಖರೀದಿಸಿದ ಜೆಎಸ್‌ಡಬ್ಲ್ಯು

7

ಐಪಿಎಲ್‌: ಡೆಲ್ಲಿ ಡೇರ್‌ಡೆವಿಲ್ಸ್‌ನಲ್ಲಿ ಪಾಲು ಖರೀದಿಸಿದ ಜೆಎಸ್‌ಡಬ್ಲ್ಯು

Published:
Updated:

ಮುಂಬೈ: ಸಜ್ಜನ್‌ ಜಿಂದಾಲ್ ಮಾಲೀಕತ್ವದ ಜೆಎಸ್‌ಡಬ್ಲ್ಯು ಸಂಸ್ಥೆ, ಇಂಡಿಯನ್ ಪ್ರೀಮಿಯರ್‌ ಲೀಗ್‌ನಲ್ಲಿ (ಐಪಿಎಲ್‌) ಆಡುವ ಡೆಲ್ಲಿ ಡೇರ್‌ಡೆವಿಲ್ಸ್‌ ತಂಡದ ಶೇಕಡ 50 ರಷ್ಟು ಪಾಲು ಖರೀದಿಸಿದೆ.

ಈ ವಿಷಯವನ್ನು ಡೇರ್‌ಡೆವಿಲ್ಸ್‌ ಫ್ರಾಂಚೈಸ್‌ನ ಮಾಲೀಕತ್ವ ಹೊಂದಿರುವ ಜಿಎಂಆರ್‌ ಸಮೂಹ ಸಂಸ್ಥೆ ಶುಕ್ರವಾರ ತಿಳಿಸಿದೆ. ಇದಕ್ಕೆ ಭಾರತ ಕ್ರಿಕೆಟ್‌ ನಿಯಂತ್ರಣ ಮಂಡಳಿ (ಬಿಸಿಸಿಐ) ಒಪ್ಪಿಗೆ ನೀಡಬೇಕಿದೆ.

‘ನಾವು ಡೇರ್‌ಡೆವಿಲ್ಸ್‌ ತಂಡದ ಶೇಕಡ 50 ರಷ್ಟು ಪಾಲು ಪಡೆದುಕೊಳ್ಳಲು ನಿರ್ಧರಿಸಿದ್ದೇವೆ. ಈ ಸಂಬಂಧ ಜಿಎಂಆರ್‌ ಸಮೂಹ ಸಂಸ್ಥೆ ಜೊತೆ ಒಪ್ಪಂದವನ್ನೂ ಮಾಡಿಕೊಳ್ಳಲಾಗಿದೆ’ ಎಂದು ಜೆಎಸ್‌ಡಬ್ಲ್ಯು ಸ್ಪೋರ್ಟ್ಸ್‌ ಪ್ರಕಟಣೆಯಲ್ಲಿ ತಿಳಿಸಿದೆ.

ಜೆಎಸ್‌ಡಬ್ಲ್ಯು, ಇಂಡಿಯನ್‌ ಸೂಪರ್‌ ಲೀಗ್‌ನಲ್ಲಿ (ಐಎಸ್‌ಎಲ್‌) ಆಡುವ ಬೆಂಗಳೂರು ಫುಟ್‌ಬಾಲ್‌ ಕ್ಲಬ್‌ (ಬಿಎಫ್‌ಸಿ) ತಂಡದ ಮಾಲೀಕತ್ವ ಹೊಂದಿದೆ. ಈ ಸಂಸ್ಥೆಯ ಒಡೆತನದ ತಂಡ ಮುಂದಿನ ವರ್ಷದಿಂದ ಹಾಕಿ ಇಂಡಿಯಾ ಲೀಗ್‌ನಲ್ಲಿ ಆಡಲಿದೆ. ಜಿಎಂಆರ್‌ ಸಮೂಹ 2008ರಲ್ಲಿ ಡೇರ್‌ಡೆವಿಲ್ಸ್‌ ತಂಡವನ್ನು ಖರೀದಿಸಿತ್ತು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry