ಇಂಗ್ಲೆಂಡ್‌ಗೆ ಸರಣಿ ಜಯ

7
ಕ್ರಿಕೆಟ್‌: ಅಂತಿಮ ಪಂದ್ಯದಲ್ಲಿ ಸೋತ ನ್ಯೂಜಿಲೆಂಡ್‌; ಬೇಸ್ಟೊ ಶತಕ

ಇಂಗ್ಲೆಂಡ್‌ಗೆ ಸರಣಿ ಜಯ

Published:
Updated:
ಇಂಗ್ಲೆಂಡ್‌ಗೆ ಸರಣಿ ಜಯ

ಕ್ರೈಸ್ಟ್‌ಚರ್ಚ್‌: ಆರಂಭಿಕ ಆಟಗಾರ ಜಾನಿ ಬೇಸ್ಟೊ (104; 60ಎ, 9ಬೌಂ, 6ಸಿ) ಅವರ ಮನಮೋಹಕ ಶತಕದ ಬಲದಿಂದ ಇಂಗ್ಲೆಂಡ್‌ ತಂಡ ಐದನೇ ಏಕದಿನ ಪಂದ್ಯದಲ್ಲಿ 7 ವಿಕೆಟ್‌ಗಳಿಂದ ನ್ಯೂಜಿಲೆಂಡ್‌ ತಂಡ ವನ್ನು ಮಣಿಸಿದೆ. ಇದರೊಂದಿಗೆ 3–2ರಿಂದ ಸರಣಿ ಗೆದ್ದಿದೆ.

ಹೇಗ್ಲೆ ಓವಲ್‌ ಮೈದಾನದಲ್ಲಿ ಶನಿ ವಾರ ಮೊದಲು ಬ್ಯಾಟಿಂಗ್ ಮಾಡಿದ ನ್ಯೂಜಿಲೆಂಡ್ ತಂಡ 49.5 ಓವರ್‌ಗಳಲ್ಲಿ 223ರನ್‌ ಕಲೆಹಾಕಿತು. ಈ ಗುರಿಯನ್ನು ಇಂಗ್ಲೆಂಡ್ 32.4 ಓವರ್‌ಗಳಲ್ಲಿ 3 ವಿಕೆಟ್‌ ಕಳೆದುಕೊಂಡು ಮುಟ್ಟಿತು.

ಇಂಗ್ಲೆಂಡ್‌ಗೆ ಜಾನಿ ಬೆಸ್ಟೋ ಮತ್ತು ಅಲೆಕ್ಸ್‌ ಹೇಲ್ಸ್‌ (61; 74ಎ, 9ಬೌಂ) ಅಬ್ಬರದ ಆರಂಭ ನೀಡಿದರು. ಇವರು ಮೊದಲ ವಿಕೆಟ್‌ ಪಾಲುದಾರಿಕೆಯಲ್ಲಿ 155ರನ್‌ ಗಳಿಸಿ ತಂಡದ ಗೆಲುವಿಗೆ ನೆರವಾದರು.

ಸಂಕ್ಷಿಪ್ತ ಸ್ಕೋರ್‌: ನ್ಯೂಜಿಲೆಂಡ್‌: 49.5 ಓವರ್‌ಗಳಲ್ಲಿ 223 (ಮಾರ್ಟಿನ್‌ ಗಪ್ಟಿಲ್‌ 47, ಕೇನ್‌ ವಿಲಿಯಮ್ಸನ್‌ 14, ಟಾಮ್‌ ಲಥಾಮ್‌ 10, ಹೆನ್ರಿ ನಿಕೊಲ್ 55, ಮಿಷೆಲ್‌ ಸ್ಯಾಂಟನರ್‌ 67, ಟಿಮ್‌ ಸೌಥಿ 10; ಕ್ರಿಸ್‌ ವೋಕ್ಸ್‌ 32ಕ್ಕೆ3, ಮಾರ್ಕ್‌ ವುಡ್‌ 26ಕ್ಕೆ1, ಆದಿಲ್‌ ರಶೀದ್‌ 42ಕ್ಕೆ3, ಮೋಯಿನ್‌ ಅಲಿ 39ಕ್ಕೆ1, ಟಾಮ್‌ ಕರನ್‌ 46ಕ್ಕೆ2).

ಇಂಗ್ಲೆಂಡ್‌: 32.4 ಓವರ್‌ಗಳಲ್ಲಿ 3 ವಿಕೆಟ್‌ಗೆ 229 (ಜಾನಿ ಬೇಸ್ಟೊ 104, ಅಲೆಕ್ಸ್‌ ಹೇಲ್ಸ್‌ 61, ಜೋ ರೂಟ್‌ ಔಟಾಗದೆ 23, ಬೆನ್‌ ಸ್ಟೋಕ್ಸ್‌ ಔಟಾಗದೆ 26; ಟ್ರೆಂಟ್‌ ಬೌಲ್ಟ್‌ 50ಕ್ಕೆ1, ಮಿಷೆಲ್‌ ಸ್ಯಾಂಟನರ್‌ 44ಕ್ಕೆ1, ಇಶ್‌ ಸೋಧಿ 78ಕ್ಕೆ1).

ಫಲಿತಾಂಶ: ಇಂಗ್ಲೆಂಡ್‌ಗೆ 7 ವಿಕೆಟ್‌ ಗೆಲುವು ಹಾಗೂ 3–2ರಲ್ಲಿ ಸರಣಿ.

ಪಂದ್ಯ ಶ್ರೇಷ್ಠ: ಜಾನಿ ಬೇಸ್ಟೊ.

ಸರಣಿ ಶ್ರೇಷ್ಠ: ಕ್ರಿಸ್‌ ವೋಕ್ಸ್‌.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry