ಡೇವಿಸ್‌ ಕಪ್‌: ಪೇಸ್‌ಗೆ ಸ್ಥಾನ ಸಿಗುವ ನಿರೀಕ್ಷೆ

ಮಂಗಳವಾರ, ಮಾರ್ಚ್ 19, 2019
33 °C
ಇಂದು ಡೇವಿಸ್‌ ಕಪ್‌ಗೆ ಭಾರತ ತಂಡದ ಆಯ್ಕೆ

ಡೇವಿಸ್‌ ಕಪ್‌: ಪೇಸ್‌ಗೆ ಸ್ಥಾನ ಸಿಗುವ ನಿರೀಕ್ಷೆ

Published:
Updated:
ಡೇವಿಸ್‌ ಕಪ್‌: ಪೇಸ್‌ಗೆ ಸ್ಥಾನ ಸಿಗುವ ನಿರೀಕ್ಷೆ

ನವದೆಹಲಿ: ಭಾರತದ ಅನುಭವಿ ಟೆನಿಸ್‌ ಆಟಗಾರ ಲಿಯಾಂಡರ್‌ ಪೇಸ್‌ ಅವರಿಗೆ ಭಾನುವಾರ ಪ್ರಕಟಗೊಳ್ಳಲಿರುವ ಡೇವಿಸ್‌ ಕಪ್‌ ತಂಡದಲ್ಲಿ ಸ್ಥಾನ ಸಿಗುವ ಸಾಧ್ಯತೆ ಇದೆ.

ಮುಂದಿನ ತಿಂಗಳು ನಡೆಯುವ ಡೇವಿಸ್‌ ಕಪ್ ಸರಣಿಯಲ್ಲಿ ಭಾರತ ತಂಡ ಚೀನಾ ಎದುರು ಆಡಲಿದೆ.

ಹೋದ ವರ್ಷ ಏಪ್ರಿಲ್ ತಿಂಗಳಿನಲ್ಲಿ ನಡೆದ ಉಜ್ಬೇಕಿಸ್ತಾನ ಎದುರಿನ ಪಂದ್ಯದಲ್ಲಿ ಪೇಸ್‌ಗೆ ಸ್ಥಾನ ನೀಡಿರಲಿಲ್ಲ. ‘ಈ ಬಾರಿ ಅನುಭವಿ ಆಟಗಾರ ಲಿಯಾಂಡರ್ ತಂಡದಲ್ಲಿ ಸ್ಥಾನ ಪಡೆಯುವ ನಿರೀಕ್ಷೆ ಇದೆ. ಭಾರತ ತಂಡದಲ್ಲಿ ಅವರು ಆಡಿದರೆ ಜಯದ ಸಾಧ್ಯತೆ ಹೆಚ್ಚು’ ಎಂದು ಎಐಟಿಎ ಹಿರಿಯ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.

‘ಡಬಲ್ಸ್‌ನಲ್ಲಿ ಪೇಸ್‌ ಅವರು ಪಂದ್ಯ ಗೆದ್ದುಕೊಡುವ ಸಮರ್ಥರು. ವಿಶ್ವ ಗುಂಪಿನ ಪ್ಲೇ ಆಫ್‌ನಲ್ಲಿ ಹಿರಿಯ ಆಟಗಾರರ ಅಗತ್ಯವಿದೆ’ ಎಂದು ಅವರು ಹೇಳಿದ್ದಾರೆ.

‘ತಂಡದ ನಾಯಕ ಮಹೇಶ್‌ ಭೂಪತಿ, ರೋಹನ್ ಬೋಪಣ್ಣ ಅವರಿಗೆ ಪೇಸ್‌ ಅವರೊಂದಿಗೆ ಉತ್ತಮ ಬಾಂಧವ್ಯ ಇಲ್ಲ. ಆದರೆ ದೇಶಕ್ಕಾಗಿ ಎಲ್ಲವನ್ನೂ ಬದಿಗೊತ್ತಿ ಆಡಬೇಕು. ಪೇಸ್ ಆಯ್ಕೆ ಕುರಿತು ಸಮಿತಿ ಖಂಡಿತವಾಗಿಯೂ ಚರ್ಚಿಸಲಿದೆ’ ಎಂದು ಅವರು ಮಾಹಿತಿ ನೀಡಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry