ಫುಟ್‌ಬಾಲ್‌: ರೊನಾಲ್ಡೊ ಮಿಂಚು

ಮಂಗಳವಾರ, ಮಾರ್ಚ್ 19, 2019
20 °C

ಫುಟ್‌ಬಾಲ್‌: ರೊನಾಲ್ಡೊ ಮಿಂಚು

Published:
Updated:
ಫುಟ್‌ಬಾಲ್‌: ರೊನಾಲ್ಡೊ ಮಿಂಚು

ಈಬರ್‌, ಸ್ಪೇನ್‌: ಕ್ರಿಸ್ಟಿಯಾನೊ ರೊನಾಲ್ಡೊ ಗಳಿಸಿದ ಎರಡು ಗೋಲುಗಳ ನೆರವಿನಿಂದ ರಿಯಲ್‌ ಮ್ಯಾಡ್ರಿಡ್‌ ತಂಡ ಲಾ ಲಿಗಾ ಫುಟ್‌ಬಾಲ್‌ ಚಾಂಪಿಯನ್‌ಷಿಪ್‌ನ ಪಂದ್ಯದಲ್ಲಿ ಗೆದ್ದಿದೆ.

ಶನಿವಾರ ನಡೆದ ಹೋರಾಟದಲ್ಲಿ ರಿಯಲ್‌ ಮ್ಯಾಡ್ರಿಡ್‌ 2–1 ಗೋಲು ಗಳಿಂದ ಈಬರ್‌ ತಂಡದ ಸವಾಲು ಮೀರಿತು.

ಉಭಯ ತಂಡಗಳು ಆರಂಭ ದಿಂದಲೇ ಜಿದ್ದಾಜಿದ್ದಿನ ಪೈಪೋಟಿ ನಡೆಸಿದವು. ಹೀಗಾಗಿ ಮೊದಲ 30 ನಿಮಿಷಗಳ ಆಟ ಗೋಲುರಹಿತವಾಗಿತ್ತು. ನಂತರ ಮ್ಯಾಡ್ರಿಡ್‌ ತಂಡವು ಆಟದ ವೇಗ ಹೆಚ್ಚಿಸಿಕೊಂಡಿತು. 34ನೇ ನಿಮಿಷದಲ್ಲಿ ರೊನಾಲ್ಡೊ ತಂಡದ ಖಾತೆ ತೆರೆದರು.

50ನೇ ನಿಮಿಷದಲ್ಲಿ ಈಬರ್‌ ತಂಡದ ಇವಾನ್‌ ರೆಮಿಸ್‌  ಗೋಲು ದಾಖಲಿಸಿದರು.  ನಂತರದ ಅವಧಿಯಲ್ಲಿ ಮುನ್ನಡೆಯ ಗೋಲಿಗಾಗಿ ಎರಡೂ ತಂಡಗಳು ತುರುಸಿನ ಪೈಪೋಟಿ ನಡೆಸಿದವು. 84ನೇ ನಿಮಿಷದಲ್ಲಿ ರೊನಾಲ್ಡೊ ಮೋಡಿ ಮಾಡಿದರು. ಸಹ ಆಟಗಾರನಿಂದ ಚೆಂಡು ಪಡೆದ ಅವರು ಅದನ್ನು ಡ್ರಿಬಲ್‌ ಮಾಡುತ್ತಾ ಎದುರಾಳಿ ಆವರಣ ಪ್ರವೇಶಿಸಿ ಗುರಿ ಮುಟ್ಟಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry