ಪಪೊವಿಚ್‌ ಮೇಲಿನ ಅಮಾನತು ಹಿಂದಕ್ಕೆ

7

ಪಪೊವಿಚ್‌ ಮೇಲಿನ ಅಮಾನತು ಹಿಂದಕ್ಕೆ

Published:
Updated:

ಬೆಂಗಳೂರು: ಅಖಿಲ ಭಾರತ ಫುಟ್‌ಬಾಲ್ ಫೆಡರೇಷನ್‌ (ಎಐಎಫ್‌ಎಫ್‌) ಶಿಸ್ತು ಸಮಿತಿ, ಐಎಸ್‌ಎಲ್‌ನಲ್ಲಿ ಆಡುವ ಎಫ್‌ಸಿ ಪುಣೆ ಸಿಟಿ ತಂಡದ ಕೋಚ್‌ ರಾಂಕೊ ಪಪೊವಿಚ್‌ ಮೇಲಿನ ಅಮಾನತು ಶಿಕ್ಷೆಯನ್ನು ಶನಿವಾರ ತಾತ್ಕಾಲಿಕವಾಗಿ ಹಿಂದಕ್ಕೆ ಪಡೆದಿದೆ.

‘ಎಫ್‌ಸಿ ಪುಣೆ ಸಿಟಿ ತಂಡ ಭಾನುವಾರ ಬಿಎಫ್‌ಸಿ ವಿರುದ್ಧ ಸೆಮಿಫೈನಲ್‌ ಪಂದ್ಯ ಆಡಲಿದೆ. ಪುಣೆ ಫ್ರಾಂಚೈಸ್‌ನ ಮನವಿ ಮೇರೆಗೆ ‍ಪಪೊವಿಚ್‌ ಮೇಲಿನ ಅಮಾನತನ್ನು ತಾತ್ಕಾಲಿಕವಾಗಿ ಹಿಂದಕ್ಕೆ ಪಡೆದಿದ್ದೇವೆ’ ಎಂದು ಎಐಎಫ್‌ಎಫ್‌ ಶಿಸ್ತು ಸಮಿತಿಯ ಮುಖ್ಯಸ್ಥ ಉಷಾನಾಥ್ ಬ್ಯಾನರ್ಜಿ ಹೇಳಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry