ನನ್ನ ಪ್ರೌಢಶಾಲೆಯ ಕನ್ನಡ ಶಿಕ್ಷಕಿ ಅಂಬುಜಾಕ್ಷಿ ಮಿಸ್

7

ನನ್ನ ಪ್ರೌಢಶಾಲೆಯ ಕನ್ನಡ ಶಿಕ್ಷಕಿ ಅಂಬುಜಾಕ್ಷಿ ಮಿಸ್

Published:
Updated:

ನನ್ನ ಪ್ರೌಢಶಾಲೆಯ ಕನ್ನಡ ಶಿಕ್ಷಕಿ ಅಂಬುಜಾಕ್ಷಿ ಮಿಸ್. ಈಗ ನೆನಸಿಕೊಳ್ಳತ್ತಿರುವ ಸ್ಫೂರ್ತಿ. ಎತ್ತರ ಕಡಿಮೆ, ಅವರ ಕಾಲಿನ ಭಾಗದಲ್ಲಿ ಪೋಲಿಯೋ ಕಾರಣ ಕುಂಟುನಡಿಗೆ. ಅವರದು ನೇರ ನುಡಿ, ಕೆಲವೊಮ್ಮೆ ಅದು ಕಠಿಣವಾಗಿರುತ್ತಿತ್ತು. ಅವರಿಂದ ಹೊಮ್ಮಿದ ಗುಣ ಸ್ವಾಭಿಮಾನ ಕೆಲವು ವಿದ್ಯಾರ್ಥಿಗಳಿಗೆ ಸ್ಫೂರ್ತಿ.

ಸಮಾಜದಲ್ಲಿ ಎಲ್ಲಾ ಪಾಠ ಕಲಿತರೂ ಸ್ಫೂರ್ತಿ ವಿಷಯದಲ್ಲಿ ನಮ್ಮ ಮೊದಲ ಅನುಭವವೇ ದೊಡ್ಡ ಪಾಠವಾಗುತ್ತದೆ. ನಾನು ಕಲಿತ ಸೆಂಟ್ ಮೇರಿಸ್ ಗರ್ಲ್ಸ್ ಹೈ ಸ್ಕೂಲ್, ತುಮಕೂರು. ಹೆಣ್ಣು ಮಕ್ಕಳೇ ಇದ್ದ ಶಾಲೆ. ಆದರೂ ಶಿಸ್ತುಗೇನೂ ಕಡಿಮೆ ಇರಲಿಲ್ಲ. ಅಂಬುಜಾಕ್ಷಿ ಮಿಸ್ ಎಂದರೆ ಒಂದು ಅಭಿಮಾನ, ಅದು ಶಿಸ್ತಿನಿಂದಾಗ್ಯೂ ಪ್ರಭಾವವಿತ್ತು.

ನನ್ನ ಗಮನಕ್ಕೆ ಬಂದಂತೆ ಅಂಬುಜಾಕ್ಷಿ ಮಿಸ್‌ಗೆ ಅವರ ತಂದೆಯೇ ಅವರ ದೊಡ್ಡ ಬಂಧು. ಪಾಠದಲ್ಲಿ ನಿಷ್ಣಾತೆ, ತುಸೂ ಉಚ್ಚಾರದಲ್ಲಿ ಲೋಪಬಾರದಂತೆ ಕಾಪಾಡಿಕೊಂಡವರು. ಅವರು ಹೆಜ್ಜೆ ಹೆಜ್ಜೆಗೂ ಸುಧಾರಿಸಿಕೊಂಡು ಬರುತ್ತಿದ್ದನ್ನು ನಾನು ಮನಸ್ಸಿಗೆ ತೆಗೆದು ಕೊಂಡಿದ್ದೆ. ಪ್ರಾಥಾಮಿಕ ಶಾಲೆಯಲ್ಲಿ ನನಗೂ ಪೋಲಿಯೊಗೆ ಒಳಗಾಗಿದ್ದ ಗೆಳತಿ ಇದ್ದಳು. ಸದಾ ನೆನಪಾಗುತ್ತಿತ್ತು. ದೊಡ್ಡವರಾದ ಮೇಲೆ ಅವರ ಬದುಕೆಷ್ಟು ಕಠಿಣ ಎಂದು. ಆದರೆ ಅಂಬುಜಾಕ್ಷಿ ಮಿಸ್ ನಿಂದ ಆ ಚಿಂತೆ ದೂರವಾಯಿತು. ಅವರು ಹೇಳುವ ಅಭ್ಯಾಸವನ್ನು ನಾವು ತಪ್ಪುವಂತಿರಲಿಲ್ಲ. ಆದರ್ಶವಾಗಿದ್ದರು. ಅವರ ಬಿಡದ ಛಲ ನಮಗೆ ಎಲ್ಲಿಲ್ಲದÀ ಹುರುಪು ತಂದಿತು. ಅಸಾಮಾನ್ಯರೆನಿಸುತ್ತಿದ್ದಿದ್ದು ಅವರ ಅನಾರೋಗ್ಯದ ಸಂದರ್ಭದಲ್ಲಿಯೂ ಪಾಠವನ್ನು ನಗುಮೊಗದಿಂದಲೆ ಮುಗಿಸುತ್ತಿದಿದ್ದು. ಅವರ ಸರಳ ವ್ಯಕ್ತಿತ್ವ ಅಚ್ಚುಮೆಚ್ಚಾಗಿತ್ತು. ಪಡೆಯುವ ಸಂಬಳಕ್ಕೆ ಮಕ್ಕಳ ಭವಿಷ್ಯ ಎಂಬ ಒಂದೇ ಕಾರಣದಿಂದ ಆ ಜವಬ್ದಾರಿಯನ್ನು ಎಲ್ಲೂ ಬಿಟ್ಟುಕೊಟ್ಟಿರಲಿಲ್ಲ. ಅವರಿಗಾಗಿ ಒಂದು ಆಟೋ ಮನೆ ಮತ್ತು ಶಾಲೆಯ ಸಂಪರ್ಕಕ್ಕೆ ನಿಯೋಜಿತವಾಗಿತ್ತು. ಒಮ್ಮೊಮ್ಮೆ ಆ ಆಟೋ ತಡವಾದಾಗ ಮಕ್ಕಳ ಹತ್ತಿರ ಮಾತಾಡುವ ಮೃದು ಅಭ್ಯಾಸವೂ ಅವರಿಗಿತ್ತು. ಆಗೋಮ್ಮೆ ಹೇಳಿದ ಮಾತು “ಸಾಮರ್ಥ್ಯವಿದ್ದಾಗ ಮಾತ್ರ ಬದುಕು ಸುಲಭ. ಅವಲಂಬನೆ ಕ್ಷಣಿಕ ಕಲಿಕೆಯಲ್ಲಿ ಸ್ವಾಭಿಮಾನಿಯಾಗು”. “ನೀನು ಕಲಿತರೆ ನಿನಗೆ ಒಳಿತು”. ಈಗ ಆ ಕಲಿಕೆಯ ಸಾಮರ್ಥ್ಯ ನನ್ನ ಬದುಕಿನ ದಾರಿಯಾಯಿತು. ಕನ್ನಡದಲ್ಲಿ ಎಂ. ಎ ಓದಿದೆ. ಹಾಗಾಗಿ ನೆನಪಾದರು.

-ಶ್ರೀದೇವಿ ತೇಜಸ್ವಿನಿ

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry