ಕರ್ನಾಟಕದ ಪೂವಮ್ಮಗೆ ಸ್ಥಾನ

7
ಕಾಮನ್‌ವೆಲ್ತ್ ಕ್ರೀಡಾಕೂಟಕ್ಕೆ 31 ಅಥ್ಲೀಟ್‌ಗಳ ತಂಡ ಪ್ರಕಟ

ಕರ್ನಾಟಕದ ಪೂವಮ್ಮಗೆ ಸ್ಥಾನ

Published:
Updated:
ಕರ್ನಾಟಕದ ಪೂವಮ್ಮಗೆ ಸ್ಥಾನ

ನವದೆಹಲಿ: ಕರ್ನಾಟಕದ ಎಮ್‌.ಆರ್‌.ಪೂವಮ್ಮ ಸೇರಿ ಭಾರತದ 31 ಅಥ್ಲೀಟ್‌ಗಳು ಗೋಲ್ಡ್‌ಕೋಸ್ಟ್‌ನಲ್ಲಿ ನಡೆಯುವ ಕಾಮನ್‌ವೆಲ್ತ್‌ ಕ್ರೀಡಾಕೂಟಕ್ಕೆ ಆಯ್ಕೆಯಾಗಿದ್ದಾರೆ.

ಭಾರತ ಅಥ್ಲೆಟಿಕ್ಸ್‌ ಫೆಡರೇಷನ್‌ ಶನಿವಾರ ತಂಡವನ್ನು ಪ್ರಕಟಿಸಿದೆ. ತಂಡದಲ್ಲಿ 18 ಪುರುಷರು ಹಾಗೂ 13 ಮಹಿಳೆಯರು ಇದ್ದಾರೆ. ಜೂನಿಯರ್‌ ವಿಭಾಗದಲ್ಲಿ ವಿಶ್ವ ಚಾಂಪಿಯನ್ ಆಗಿದ್ದ ಜಾವೆಲಿನ್‌ ಥ್ರೋ ಸ್ಪರ್ಧಿ ನೀರಜ್ ಚೋಪ್ರಾ ಕೂಡ ಆಯ್ಕೆಯಾಗಿದ್ದಾರೆ. ಇತ್ತೀಚೆಗೆ ಪಟಿಯಾಲದಲ್ಲಿ ನಡೆದ ಫೆಡರೇಷನ್‌ ಕಪ್‌ನಲ್ಲಿ ಅವರು ಚಿನ್ನ ಗೆದ್ದಿದ್ದರು.

‘ಪೂವಮ್ಮ ಹಾಗೂ ಮಹಮ್ಮದ್ ಅನಾಸ್ ಅವರು ರಾಷ್ಟ್ರೀಯ ಶಿಬಿರದಲ್ಲಿ ರಿಲೇ ಅಭ್ಯಾಸ ನಡೆಸಲು ಒಪ್ಪಿಕೊಂಡರು. ಆದರೆ ಕರ್ನಾಟಕದ ಜಿ.ಕೆ. ವಿಜಯಕುಮಾರಿ ಇದಕ್ಕೆ ಒಪ್ಪಿಲ್ಲ. ಆದ್ದರಿಂದ ಅವರನ್ನು ಆಯ್ಕೆಗೆ ಪರಿಗಣಿಸಿಲ್ಲ’ ಎಂದು ಆಯ್ಕೆ ಸಮಿತಿ ಮಾಹಿತಿ ನೀಡಿದೆ.

ಪುರುಷರ ರಿಲೇ ತಂಡದಲ್ಲಿ ಆರು ಸ್ಪರ್ಧಿಗಳು ಇದ್ದರೆ, ಮಹಿಳೆಯರಲ್ಲಿ ಮಾತ್ರ ಐವರನ್ನು ಆಯ್ಕೆ ಮಾಡಲಾಗಿದೆ.

ಪುರುಷರ ತಂಡ ಇಂತಿದೆ: ಜಿನ್ಸನ್‌ ಜಾನ್ಸನ್, ಧರುಣ್‌ ಅಯ್ಯಸ್ವಾಮಿ, ತೇಜಸ್ವಿನಿ ಶಂಕರ್‌, ಸಿದ್ದಾರ್ಥ್‌ ಯಾದವ್‌, ಶ್ರೀಶಂಕರ್‌, ಅರ್ಪಿಂದರ್ ಸಿಂಗ್‌, ರಾಕೇಶ್‌ ಬಾಬು, ತಜಿಂದರ್‌ಪಾಲ್‌ ಸಿಂಗ್‌, ನೀರಜ್‌ ಚೋಪ್ರಾ, ವಿಪಿನ್‌, ಇರ್ಫಾನ್‌ ಥಂಡಿ, ಮನೀಷ್ ಸಿಂಗ್‌ ರಾವತ್‌, ಮಹಮ್ಮದ್ ಅನಾಸ್‌, ಜೀವನ್‌ ಸುರೇಶ್‌, ಅಮೋಜ್‌ ಜಾಕೋಬ್‌, ಕುನ್ಹು ಮಹಮ್ಮದ್‌, ಜಿತು ಬಾಬಿ, ಅರೋಕಿಯಾ ರಾಜೀವ್‌.

ಮಹಿಳೆಯರು: ಹಿಮಾ ದಾಸ್‌, ಸುರಯ್ಯಾ, ನಯನಾ ಜೇಮ್ಸ್‌, ನೀನಾ ಪಿಂಟೊ, ಸೀಮಾ ಪೂನಿಯಾ, ನವಜೀತ್‌ ಕೌರ್‌, ಧಿಲ್ಲನ್‌, ಪೂರ್ಣಿಮಾ ಹೆಂಬ್ರಮ್‌, ಸೌಮ್ಯ ಬೇಬಿ, ಕೌಶ್ಬಿರ್‌ ಕೌರ್‌, ಎಮ್‌.ಆರ್‌.ಪೂವಮ್ಮ, ಸೋನಿಯಾ ಬೈಷ್ಯ, ಸರಿತಾಬೆನ್‌ ಗಾಯಕವಾಡ್‌, ಜುನಾ ಮುರ್ಮು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry