ಇವಳೇ ನನಗೆ ರೋಲ್ ಮಾಡೆಲ್

7

ಇವಳೇ ನನಗೆ ರೋಲ್ ಮಾಡೆಲ್

Published:
Updated:
ಇವಳೇ ನನಗೆ ರೋಲ್ ಮಾಡೆಲ್

ನನ್ನ ಅಕ್ಕನೇ ನನಗೆ ಸ್ಪೂರ್ತಿಯೇ ಚಿಲುಮೆ, ಅವಳ ವಾಣಿಯೇ ನನಗೆ ಶಕ್ತಿ. ನಾನು ಮಾನಸಿಕವಾಗಿ  ಕುಗ್ಗಿದಾಗ ಸ್ಥೈರ್ಯ ತುಂಬುವಳು. ನನ್ನ ಆತ್ಮ ಬಲವನ್ನು ಸದೃಡ ಮಾಡುವಳು.  ಇವಳೇ ನನ್ನ ಸ್ನೇಹಿತೆ, ಮಾರ್ಗದರ್ಶಕಿ, ತತ್ವಜ್ಞಾನಿ, ಇವಳೇ ನನಗೆ ರೋಲ್ ಮಾಡೆಲ್. ನಾನು ಸದಾ ಅಧ್ಯಾಯನಶೀಲ ಆಗುವಂತೆ ಪ್ರೇರಣೆ  ನೀಡಿದು ನೀನೆ ಅಕ್ಕ. ನಾನು ಶಾಲೆ ಬಿಟ್ಟು ಕುಳಿತಾಗ ಮತ್ತೆ ಶಾಲೆಯೇ ಮೆಟ್ಟಿಲು ಹತ್ತಿಸಿದ್ದು ನೀನೆ ಅಲ್ವಾಕ್ಕ, ನಾನು ಓದಿನಲ್ಲಿ ಮಂದಗತಿಯ ವಿದ್ಯಾರ್ಥಿ ಆಗಿದ್ದೆ, ಶಾಲೆಯಲ್ಲಿ ಎಲ್ಲರೂ  ಹೀಯಾಳಿಸುತ್ತಿದ್ದರು. ನನ್ನ ಬೆಂಬಲಕ್ಕೆ ನಿಲ್ಲುತ್ತಿದ್ದೆ, ನನ್ನ ಪರವಾಗಿ ಜಗಳ ಮಾಡುತ್ತಿದ್ದೆ.

ನೀನು ದೊಡ್ಡ ವ್ಯಕ್ತಿಯಾಗಬೇಕು, ಈ ಜಗತ್ತು ನಿನ್ನತ್ತ ನೋಡುವ ಹಾಗೆ ಸಾಧನೆ ಮಾಡಬೇಕು ಎಂದು ಹೇಳುವಳು ನನ್ನಕ್ಕ. ನನಗೆ ಪ್ರಾಮಾಣಿಕತೆ, ಶ್ರದ್ಧೆ, ವೈಜ್ಞಾನಿಕ ಪರಿಕಲ್ಪನೆ, ಕಲಿಸಿಕೊಟ್ಟುವಳು ನೀನೆ. ಅಕ್ಕ ನಿನು ನನ್ನ ಎರಡೇಯ ತಾಯಿ ಎಂದರೆ ತಪ್ಪಾಗಲಾರದು. ನಾನು ಕಲಿಯಬೇಕು ಎಂದು ನೀನು ನಿನ್ನ ಓದು ಅರ್ಧಕ್ಕೆ ನೀಲ್ಲಿಸಿದ  ನಿಸ್ವಾರ್ಥೆ ನೀ. ಅಕ್ಕ ಐ ಲವ್ ಯೂ ಅಕ್ಕ...!

-ಆರೀಫ ವಾಲೀಕಾರ

ಪತ್ರಿಕೋದ್ಯಮ ವಿದ್ಯಾರ್ಥಿ


ರಾಣಿ ಚನ್ನಮ್ಮ ವಿವಿ ಬೆಳಗಾವಿ

೯೯೦೦೧೪೭೫೭೧

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry