ಎಸಿಪಿಗೆ ಮಹದೇವಯ್ಯಗೆ ದಂಡ

7

ಎಸಿಪಿಗೆ ಮಹದೇವಯ್ಯಗೆ ದಂಡ

Published:
Updated:

ಬೆಂಗಳೂರು: ಸ್ಥಳೀಯ ನ್ಯಾಯಾಲಯದಲ್ಲಿ ಕಲಾಪ ನಡೆಯುತ್ತಿದ್ದ ವೇಳೆ ಮೊಬೈಲ್‌ನಲ್ಲಿ ಮಾತನಾಡಿದ ಕಾರಣಕ್ಕೆ ಬಾಣಸವಾಡಿಯ ಎಸಿಪಿ ಮಹದೇವಯ್ಯ ಅವರಿಗೆ ₹350 ದಂಡ ವಿಧಿಸಲಾಗಿದೆ.

ಪ್ರಕರಣವೊಂದರ ವಿಚಾರಣೆಗೆ ಬಂದಿದ್ದ ಮಹದೇವಯ್ಯ, ನ್ಯಾಯಧೀಶ ಅರವಿಂದ್ ಕುಮಾರ್ ಸಮೀಪವೇ ಮೊಬೈಲ್‌ನಲ್ಲಿ ಮಾತನಾಡುತ್ತಿದ್ದರು. ಅದನ್ನು ಗಮನಿಸಿದ ನ್ಯಾಯಾಧೀಶರು, ‘ನ್ಯಾಯಾಲಯದಲ್ಲಿ ಮೊಬೈಲ್ ಬಳಕೆ ಮಾಡಬಾರದು ಎಂಬ ವಿಚಾರ ಪೊಲೀಸ್ ಅಧಿಕಾರಿಯಾಗಿರುವ ನಿಮಗೆ ಗೊತ್ತಿಲ್ಲವೇ’ ಎಂದು ಅವರನ್ನು ತರಾಟೆಗೆ ತೆಗೆದುಕೊಂಡರು.

ಮಹದೇವಯ್ಯ ಅವರ ಎರಡು ಮೊಬೈಲ್‌ಗಳನ್ನು ವಶಕ್ಕೆ ಪಡೆಯುವಂತೆ ನ್ಯಾಯಾಧೀಶರು ಸಿಬ್ಬಂದಿಗೆ ಸೂಚಿಸಿದರು. ಬಳಿಕ ದಂಡದ ಮೊತ್ತವನ್ನು ಪಾವತಿಸಿ, ಮೊಬೈಲ್‌ಗಳನ್ನು ತೆಗೆದುಕೊಂಡು ಹೋದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry