ತಂತ್ರಜ್ಞಾನ– ಸಾಂಸ್ಕೃತಿಕ ಉತ್ಸವ

7

ತಂತ್ರಜ್ಞಾನ– ಸಾಂಸ್ಕೃತಿಕ ಉತ್ಸವ

Published:
Updated:
ತಂತ್ರಜ್ಞಾನ– ಸಾಂಸ್ಕೃತಿಕ ಉತ್ಸವ

ಬೆಂಗಳೂರು: ಯಲಹಂಕದ ನಿಟ್ಟೆ ಮೀನಾಕ್ಷಿ ತಾಂತ್ರಿಕ ಮಹಾವಿದ್ಯಾಲಯದಲ್ಲಿ ‘ಅನಾದ್ಯಂತ-2018’ ತಂತ್ರಜ್ಞಾನ ಮತ್ತು ಸಾಂಸ್ಕೃತಿಕ ಉತ್ಸವವನ್ನು ಕೇಂದ್ರ ಸಚಿವ ಡಿ.ವಿ.ಸದಾನಂದಗೌಡ ಉದ್ಘಾಟಿಸಿದರು.

ನಂತರ ಮಾತನಾಡಿದ ಅವರು, ‘ಯಾವುದೇ ರಂಗದಲ್ಲಿ ಹೊಸದನ್ನು ಸಾಧಿಸಬೇಕಾದರೆ ಹಳೆಯದರ ನೆರವು ಅತ್ಯಗತ್ಯ. ಹಳೆಯದನ್ನು ಮರೆತರೆ ಹೊಸ ಆವಿಷ್ಕಾರ ಯಶಸ್ವಿಯಾಗುವುದಿಲ್ಲ. ವಿಶೇಷವಾದ ಸಾಧನೆಯ ಜೊತೆಗೆ ಸಾಮಾಜಿಕ ವಿಚಾರದಲ್ಲಿಯೂ ಸಾಧನೆ ಮಾಡಬೇಕು. ಇದರಿಂದ ವ್ಯಕ್ತಿತ್ ವವಿಕಸನವಾಗಲು ಸಾಧ್ಯ. ತಂತ್ರಜ್ಞಾನ ದೇಶದ ಆ‌ರ್ಥಿಕ ಪ್ರಗತಿಗೆ ಪೂರಕವಾಗಲಿದೆ’ ಎಂದರು.

ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯದ ಕುಲಾಧಿಪತಿ ಪ್ರೊ.ಎನ್.ಆರ್.ಶೆಟ್ಟಿ, ‘ತಂತ್ರಜ್ಞಾನ ಮತ್ತು ವಿಜ್ಞಾನ ಕುರಿತ ಪ್ರಾಚೀನರ ಜ್ಞಾನ ಭಂಡಾರವನ್ನು ಎಲ್ಲರಿಗೂ ಲಭಿಸುವಂತೆ ಡಿಜಿಟಲೀಕರಣ ಮಾಡಲಾಗುವುದು. ವಿದ್ಯಾಸಂಸ್ಥೆಯಲ್ಲಿ ಸಂಶೋಧನೆ ಮತ್ತು ಅನ್ವೇಷಣೆಯ ಜೊತೆಗೆ ಸಾಂಸ್ಕೃ ತಿಕ ಕಾರ್ಯಕ್ರಮಗಳಿಗೂ ಹೆಚ್ಚಿನ ಆದ್ಯತೆ ನೀಡಲಾಗುತ್ತಿದೆ’ ಎಂದು ತಿಳಿಸಿದರು.

ಪ್ರಾಚಾರ್ಯ ಡಾ.ಎಚ್.ಸಿ.ನಾಗರಾಜ್ ಮಾತನಾಡಿ, ‘ಈ ಹಬ್ಬದಲ್ಲಿ ರಾಷ್ಟ್ರಮಟ್ಟದ ಪ್ರಮುಖ 85 ವಿದ್ಯಾಸಂಸ್ಥೆಗಳ ವಿದ್ಯಾರ್ಥಿಗಳು ಭಾಗವಹಿಸಿದ್ದಾರೆ’ ಎಂದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry