ಉತ್ತರ ಪ್ರದೇಶ ಲೋಕಸಭಾ ಉಪಚುನಾವಣೆ: ಗೋರಖ್‌ಪುರ್‌, ಫುಲ್ಪುರ್‌ ಕ್ಷೇತ್ರಗಳಲ್ಲಿ ಮತದಾನ

ಗುರುವಾರ , ಮಾರ್ಚ್ 21, 2019
32 °C

ಉತ್ತರ ಪ್ರದೇಶ ಲೋಕಸಭಾ ಉಪಚುನಾವಣೆ: ಗೋರಖ್‌ಪುರ್‌, ಫುಲ್ಪುರ್‌ ಕ್ಷೇತ್ರಗಳಲ್ಲಿ ಮತದಾನ

Published:
Updated:
ಉತ್ತರ ಪ್ರದೇಶ ಲೋಕಸಭಾ ಉಪಚುನಾವಣೆ: ಗೋರಖ್‌ಪುರ್‌, ಫುಲ್ಪುರ್‌ ಕ್ಷೇತ್ರಗಳಲ್ಲಿ ಮತದಾನ

ಗೋರಖ್‌ಪುರ್‌: ಬಿಗಿಭದ್ರತೆಯೊಂದಿಗೆ ಉತ್ತರ ಪ್ರದೇಶದ ಎರಡು ಲೋಕಸಭಾ ಸ್ಥಾನಗಳಿಗೆ ಭಾನುವಾರ ಮತದಾನ ನಡೆಯುತ್ತಿದೆ.

ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಮತ್ತು ಉಪಮುಖ್ಯಮಂತ್ರಿ ಕೇಶವ್ ಪ್ರಸಾದ್‌ ಮೌರ್ಯರಿಂದ ತೆರವಾದ ಗೋರಖ್‌ಪುರ್‌ ಹಾಗೂ ಫುಲ್ಪುರ್‌ ಲೋಕಸಭಾ ಕ್ಷೇತ್ರಗಳಿಗೆ ಉಪಚುನಾವಣೆ ನಡೆಯುತ್ತಿದೆ. ಇಲ್ಲಿ ಆಡಳಿತಾರೂಢ ಬಿಜೆಪಿಗೆ ಸಮಾಜವಾದಿ ಪಕ್ಷ(ಎಸ್‌ಪಿ) ಹಾಗೂ ಕಾಂಗ್ರೆಸ್‌ ತೀವ್ರ ಸ್ಪರ್ಧೆಯೊಡ್ಡಿವೆ.

ಬಿಜೆಪಿ ಅಭ್ಯರ್ಥಿಗಳಾಗಿ ಗೋರಖ್‌ಪುರ್‌ನಿಂದ ಉಪೇಂದ್ರ ದತ್ತ ಶುಕ್ಲ, ಫುಲ್ಪುರ್‌ನಿಂದ ಕುಶಲೇಂದ್ರ ಸಿಂಗ್‌  ಸ್ಪರ್ಧಿಸಿದ್ದಾರೆ. ಸಮಾಜವಾದಿ ಪಕ್ಷದ ಅಭ್ಯರ್ಥಿಗಳಾಗಿ ಪ್ರವೀಣ್‌ ನಿಶಾದ್‌(ಫುಲ್ಪುರ್‌), ನಾಗೇಂದ್ರ ಪ್ರತಾಪ್‌ ಸಿಂಗ್‌ ಪಟೇಲ್‌(ಗೋರಖ್‌ಪುರ್‌) ಹಾಗೂ ಕಾಂಗ್ರೆಸ್‌ನಿಂದ ಸುರೀತ ಕರೀಂ(ಗೋರಖ್‌ಪುರ್‌) ಮತ್ತು ಮನೀಷ್‌ ಮಿಶ್ರಾ(ಫುಲ್ಪುರ್‌) ಕಣದಲ್ಲಿದ್ದಾರೆ.

ಗೋರಖ್‌ಪುರ್‌ನಲ್ಲಿ 19.49 ಲಕ್ಷ ಹಾಗೂ ಫುಲ್ಪುರ್‌ನಲ್ಲಿ ಲೋಕಸಭಾ ಕ್ಷೇತ್ರದಲ್ಲಿ 19.61 ಲಕ್ಷ  ಮತದಾರರಿದ್ದಾರೆ.

* ಬಿಎಸ್‌ಪಿ–ಎಸ್‌ಪಿ ಅವಕಾಶವಾದಿ ಮೈತ್ರಿಗೆ ಜನರು ಮತ ನೀಡುವುದಿಲ್ಲ. ಬಿಜೆಪಿ ಗೆಲುವು ಖಚಿತ. 

- ಯೋಗಿ ಆದಿತ್ಯನಾಥ, ಸಿಎಂ, ಉತ್ತರ ಪ್ರದೇಶ

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry