ಚಿತ್ತೂರು ಸಮೀಪ ಬಸ್‌–ಕಾರು ಡಿಕ್ಕಿ: ನಾಲ್ಕು ಮಂದಿ ಸಾವು

ಗುರುವಾರ , ಮಾರ್ಚ್ 21, 2019
30 °C

ಚಿತ್ತೂರು ಸಮೀಪ ಬಸ್‌–ಕಾರು ಡಿಕ್ಕಿ: ನಾಲ್ಕು ಮಂದಿ ಸಾವು

Published:
Updated:
ಚಿತ್ತೂರು ಸಮೀಪ ಬಸ್‌–ಕಾರು ಡಿಕ್ಕಿ: ನಾಲ್ಕು ಮಂದಿ ಸಾವು

ಕೋಲಾರ: ಆಂಧ್ರ ಪ್ರದೇಶದ ಚಿತ್ತೂರು ಜಿಲ್ಲೆಯ ಬಂಗಾರುಪಾಳ್ಯಂ ಬಳಿ ಭಾನುವಾರ ನಸುಕಿನಲ್ಲಿ ಕಾರು ಮತ್ತು ಬಸ್ ನಡುವೆ ಸಂಭವಿಸಿದ ಅಪಘಾತದಲ್ಲಿ ರಾಜ್ಯದ ನಾಲ್ಕು ಮಂದಿ ಸ್ಥಳದಲ್ಲೇ ಮೃತಪಟ್ಟಿದ್ದಾರೆ.

ಮೃತರು ರಾಜ್ಯದ ಕಾಸರಗೋಡಿನವರು. ಅವರು ಕಾರಿನಲ್ಲಿ ಆಂಧ್ರಪ್ರದೇಶದ ತಿರುಪತಿ ತಿರುಮಲ ದೇವಸ್ಥಾನಕ್ಕೆ ಹೋಗುತ್ತಿದ್ದಾಗ ಈ ದುರ್ಘಟನೆ ನಡೆದಿದೆ.

(ಅಪಘಾತದಲ್ಲಿ ಕಾರು ಜಖಂಗೊಂಡಿರುವುದು)

ಎಸ್‌ಆರ್‌ಎಸ್ ಟ್ರಾವೆಲ್ಸ್ ಬಸ್ ಚಾಲಕ ಕಂಟೇನರ್ ಹಿಂದಿಕ್ಕುವ ಯತ್ನದಲ್ಲಿ ಎದುರುಗಡೆಯಿಂದ ಬರುತ್ತದ್ದ ಕಾರಿಗೆ ವಾಹನ ಗುದ್ದಿಸಿದ್ದಾನೆ. ಈ ಅಪಘಾತದಲ್ಲಿ ಮಹಿಳೆ ಸೇರಿ ನಾಲ್ಕು ಮಂದಿ ಮೃತ ಪಟ್ಟಿದ್ದು, ಗಾಯಗೊಂಡಿರುವ ನಾಲ್ಕು ಜನರನ್ನು ಬಂಗಾರುಪಾಳ್ಯಂ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

(ಅಪಘಾತದಲ್ಲಿ ಗಾಯಗೊಂಡಿರುವ ಮಹಿಳೆ)

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry